12:20 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಪಿ.ಎ. ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ: ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ ಭಾಗಿ

19/05/2024, 00:10

ಮಂಗಳೂರು(reporterkarnataka.com): ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ ಹಾಗೂ ಉಳಿದ ಕಾಲೇಜುಗಳಿಗಿಂತ ಭಿನ್ನ ಎನ್ನುವುದನ್ನು ಸಾಬೀತುಪಡಿಸುತ್ತಿದೆ ಎಂದು
ಮಂಗಳೂರು ವಿವಿಯ ಕುಲಪತಿಗಳಾದ ಡಾ.ಪಿ.ಎಲ್. ಧರ್ಮ ಹೇಳಿದರು.


ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ 2024ರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ. ಹಾಸಿಂ ಓದಿದರು. ಪಿಎಇಟಿಯ ಹಣಕಾಸು ವ್ಯವಹಾರಗಳ ಮುಖ್ಯಸ್ಥರಾದ ಅಹ್ಮದ್ ಕುಟ್ಟಿ ಕೆ., ಕಾಲೇಜ್ ನ ಖರೀದಿ ವಿಭಾಗದ ನಿರ್ದೇಶಕರಾದ ಹಾರಿಸ್ ಟಿಡಿ, ಪಿಎಇಟಿಯ ಎ.ಜಿ.ಎಂ ಶರಫುದ್ದೀನ್ ಪಿ.ಕೆ ಅಥಿತಿಗಳಾಗಿ ಆಗಮಿಸಿದರು. ಪಿ.ಎ.ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ. ರಮೀಝ್ ಕೆ, ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಸಲೀಮುಲ್ಲಾ ಖಾನ್, ಪಿ.ಎ. ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲರಾದ ಡಾ. ಸಜೀಶ್ ರಘುನಾಥನ್, ಪಿಎ‌ಇಟಿಯ ವಿದ್ಯಾರ್ಥಿ ಡೀನ್ ಡಾ. ಸಯ್ಯಿದ್ ಅಮೀನ್, ಉಪ ಪ್ರಾಂಶುಪಾಲರಾದ ಡಾ.ಹರಿಕೃಷ್ಣನ್ ಜಿ., ಸಿ.ಪಾಡ್ ಮುಖ್ಯಸ್ಥರಾದ ಫೈಝಲ್ ಎನ್, ಐ.ಕ್ಯೂ.ಎ.ಸಿ ಯ ಮುಖ್ಯಸ್ಥೆ ವಾಣಿಶ್ರೀ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡೆಲ್ಸಿ ಡಿ.ಸೋಜ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್, ಮಾನವಿಕ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್ ಬೇಗಂ ಹಾಗೂ ವಾರ್ಷಿಕೋತ್ಸವದ ಸಂಯೋಜಕರಾದ ಬಶೀರ್ ಅಹ್ಮದ್, ಚೈತ್ರಾ ಎನ್. ವಿ. ಮತ್ತು ಅನ್ಫಾ ನಿಶಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ವಿಜೇತರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು. ಅಧ್ಯಾಪಕರಾದ ಲವೀನಾ ಡಿ. ಸೋಜ ಮತ್ತು ಅಫ್ರದತ್ ಅಮಾನ್ ಕಾರ್ಯಕ್ರಮ ನಿರೂಪಿಸಿದರೆ ವಿದ್ಯಾರ್ಥಿಗಳಾದ ಇರ್ಫಾದ್ ಪ್ರಾರ್ಥನೆ ನೆರವೇರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು