6:27 PM Saturday5 - July 2025
ಬ್ರೇಕಿಂಗ್ ನ್ಯೂಸ್
ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು

ಇತ್ತೀಚಿನ ಸುದ್ದಿ

ವಾಮಂಜೂರು ಚರ್ಚ್ ಹಾಲ್: 19ರಂದು ‘ವೊಜೆಂ ಉತ್ಸವ್ 2024’

17/05/2024, 21:20

ಮಂಗಳೂರು(reporterkarnataka.com): ಮಂಗಳೂರಿನ‌ ಸಾಮಾಜಿಕ ಸೇವಾ ಸಂಸ್ಥೆ ಸಾಂಗಾತಿ ಮಂಗ್ಳೂರು ಸಹಯೋಗದಲ್ಲಿ ನಗರದ ಬೊಂದೇಲ್ ಸಂತ ಲಾರೆನ್ಸ್ ಚರ್ಚು ಹಾಗೂ ಪುಣ್ಯಕ್ಷೇತ್ರದ ಸಹಾಯಾರ್ಥ ಏರ್ಪಡಿಸಿದ ವೊಜೆಂ ಉತ್ಸವ್ 2024 ಮೇ 19ರಂದು ಬೆಳಗ್ಗೆ 11 ಗಂಟೆಗೆ ವಾಮಂಜೂರು ಚರ್ಚ್ ಹಾಲ್ ನಲ್ಲಿ ಆರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಾಮಂಜೂರು ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಜೇಮ್ಸ್ ಡಿಸೋಜ, ಬೊಂದೇಲ್ ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಆ್ಯಂಡೂ ಲಿಯೊ ಡಿಸೋಜ, ಬೊಂದೇಲ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ವಂ| ಫಾ| ವಿಲಿಯಂ ಡಿಸೋಜ, ಬೊಂದೇಲ್ ಸಂತ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲರಾದ ವಂ| ಫಾ| ಪೀಟರ್ ಗೊನ್ಸಾಲ್ವಿಸ್, ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೊನ್ಸಾ, ಯುವ ಉದ್ಯಮಿ ಎಲೊನ್ ರೊಡ್ರಿಗಸ್, ಯುವ ನಟಿ ವೆನ್ಸಿಟಾ ಡಯಾಸ್, ಸಂತ ಲಾರೆನ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿಸಿಲ್ವಾ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಮಿತೇಶ್ ಡಿಸೋಜ ಭಾಗವಹಿಸಲಿದ್ದಾರೆ.
ಈ ಉತ್ಸವದಲ್ಲಿ ನಗರ ಹಾಗೂ ಹೊರವಲಯದ 25 ಸದಸ್ಯರನ್ನೊಳಗೊಂಡ ಹಲವಾರು ತಂಡಗಳು ಭಾಗವಹಿಸಲಿದ್ದು, ಪ್ರೇಕ್ಷಕರಿಗೆ ಫುಡ್ ಕೋರ್ಟ್ ಗಳು ಕೂಡ ಲಭ್ಯವಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವಿಶಾಲಿನ್ ಶಾಂತಿ ಸಲ್ದಾನ್ಹಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು