2:40 PM Saturday5 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಭಾಷೆಯು ದೇಶದ ಸಂಸ್ಕೃತಿ, ಭವಿಷ್ಯವನ್ನು ಉಳಿಸುವ ಪ್ರಮುಖ ಸಾಧನವೂ ಹೌದು: ಮಂಗಳೂರು ವಿವಿ ಕುಲಪತಿ ಪ್ರೊ‌. ಪಿ.ಎಲ್. ಧರ್ಮ

13/05/2024, 22:24

ಮಂಗಳೂರು(reporterkarnataka.com):ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಾಗಿರದೆ ದೇಶದ ಸಂಸ್ಕೃತಿ, ಭವಿಷ್ಯವನ್ನು ಉಳಿಸುವ ಪ್ರಮುಖ ಸಾಧನವೂ ಆಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ‌. ಪಿ.ಎಲ್. ಧರ್ಮ ಹೇಳಿದರು.


ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ನಿರ್ದೇಶನಾಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ಸ್ನಾತಕೋತ್ತರ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಂಯುಕ್ತ ಆಶ್ರಯದಲ್ಲಿ 5 ದಿನಗಳ ವಿಶೇಷ ಹಿಂದಿ ಯುವ ಬರಹಗಾರರ ಶಿಬಿರವನ್ನು ಸೋಮವಾರ ನಗರದ ಹಂಪನಕಟ್ಟೆ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.



ಯುವ ಬರಹಗಾರರು ಮುಖ್ಯವಾಗಿ ಭಾಷೆ, ಪದಗಳ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕು. ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಾಗಿರದೆ ದೇಶದ ಸಂಸ್ಕೃತಿ, ಭವಿಷ್ಯವನ್ನು ಉಳಿಸುವ ಪ್ರಮುಖ ಸಾಧನವೂ ಆಗಿದೆ. ಸಂಪತ್ತು, ಅಧಿಕಾರ ಎಲ್ಲವೂ ಇದ್ದು ಮಾತನಾಡುವ ಭಾಷೆ ಚೆನ್ನಾಗಿರದಿದ್ದರೆ ಆತ ಸಾಮಾಜಿಕವಾಗಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.


ಲೇಖಕ ನಾದವ ಯಾವ ವಸ್ತುವನ್ನು ಆಯ್ಕೆ ಮಾಡುತ್ತಾನೆ. ಅದನ್ನು ಹೇಗೆ ತನ್ನ ಲೇಖನದ ಮೂಲಕ ಓದುಗರಿಗೆ ತಲುಪಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ ಎಂದರು.
ಆನ್‌ಲೈನ್ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಸುನಿಲ್ ಬಾಬುರಾವ್ ಕುಲಕರ್ಣಿ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಲೇಖಕರನ್ನಾಗಿ ಪ್ರೇರೇಪಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಲೇಖನದ ವಸ್ತು, ವಿಷಯಗಳು, ನಮ್ಮ ಸಂಸ್ಕೃತಿ-ಪರಂಪರೆ ವಿಚಾರವಾಗಿ ಲೇಖನಗಳಲ್ಲಿ ಅಳವಡಿಸುವುದು ಹೇಗೆ ಎನ್ನುವುದನ್ನು ತಿಳಿಸಿ, ಅವರನ್ನು ಪರಿಪಕ್ವರನ್ನಾಗಿ ಮಾಡಲಾಗುತ್ತದೆ. ಸೃಜನಾತ್ಮತೆಗೆ ಪ್ರೋತ್ಸಾಹ ನೀಡುವುದು ಶಿಬಿರದ ಮುಖ್ಯ ಉದ್ದೇಶ ಎಂದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶನಾಲಯದ ಪ್ರಮುಖರಾದ ಡಾ. ಪ್ರದೀಪ್ ಕುಮಾರ್ ಠಾಕೂರ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಬಿರದ ರೂಪುರೇಷೆಗಳ ಬಗ್ಗೆ ವಿವರಿಸಿದರು.

ಐಕ್ಯೂಎಸಿ ಸಂಯೋಜಕ ಡಾ.ಸಿದ್ದರಾಜು ಉಪಸ್ಥಿತರಿದ್ದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ.ನಾಗರತ್ನ ರಾವ್ ಸ್ವಾಗತಿಸಿದರು. ಹಿಂದಿ ಉಪನ್ಯಾಸಕಿ ಡಾ. ಸುಮಾ ಟಿ. ರೋಡನ್ನವರ್ ಕಾರ್ಯಕ್ರಮ ನಿರೂಪಿಸಿದರು.
5 ದಿನಗಳ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಈಶ್ವರ ಪವಾರ್ ಪುಣೆ, ಡಾ. ಪ್ರತಿಭಾ ಮೊದಲಿಯಾರ್ ಮೈಸೂರು, ಪ್ರೊ. ಪ್ರಭಾ ವಿ. ಭಟ್, ಧಾರವಾಡ, ಡಾ. ಸುಮಂಗಲಾ ಮಾಮ್ಮಿಗಟ್ಟಿ ಧಾರವಾಡ, ಡಾ. ಮಂಜುನಾಥ ಐಕಳ ಮಂಗಳೂರು, ಡಾ. ಮುಕುಂದ ಪ್ರಭು ಮಂಗಳೂರು, ಡಾ. ಸುಮಾ ಟಿ. ರೋಡನ್ನವರ್ ಮಂಗಳೂರು ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು