ಇತ್ತೀಚಿನ ಸುದ್ದಿ
ಮಂಗಳೂರಿನ ಪಾಲ್ದನೆ ಚರ್ಚ್ ನಲ್ಲಿ 10 ಮಂದಿ ಮಕ್ಕಳಿಗೆ ಪ್ರಥಮ ಪರಮ ಪ್ರಸಾದ: ಹೆತ್ತವರ ಸಮಕ್ಷಮದಲ್ಲಿ ಪವಿತ್ರ ವಿಧಿವಿಧಾನ
05/05/2024, 19:35
ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ 10 ಮಂದಿ ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ನೀಡುವ ಸಮಾರಂಭ ಭಾನುವಾರ ನಡೆಯಿತು.
ಚರ್ಚಿನ ಧರ್ಮ ಗುರು ರೆ. ಫಾ. ಅಲ್ಬನ್ ಡಿ ಸೋಜಾ ಅವರು ಬಲಿಪೂಜೆಯ ಸಂದರ್ಭದಲ್ಲಿ ಪ್ರಥಮ ಪರಮ ಪ್ರಸಾದ ನೀಡುವ ಕಾರ್ಯಕ್ರಮವನ್ನು ನೆರವೇರಿಸಿದರು.
ಮಕ್ಕಳಾದ ಆಲ್ಡನ್ ವೇಗಸ್, ರೆಯಾನ್ ಮೊಂತೇರೊ, ಡಾಲ್ಟನ್ ಪಿಂಟೊ, ಜೇಶ್ಮಾ ಡಿ ಕುನ್ಹಾ, ಲಿಯೋನ್ ಗಾಮಾ, ಮೇಲಿಶಾ ಕ್ರಾಸ್ತಾ, ರೇನಿಯಲ್ ಡಿ ಸೋಜಾ, ರಿಶಾಲ್ ಮಸ್ಕರೇನ್ಹಸ್, ವಿಯಾನ್ನಿ ಫೊನ್ಸೇಕಾ, ಮಿಕಾಯಿಲ್ ಕ್ರಾಸ್ತಾ ಸೇರಿದಂತೆ 10 ಮಂದಿ ಮಕ್ಕಳು ತಮ್ಮ ಹೆತ್ತವರ ಸಮಕ್ಷಮ ಪರಮ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಲಿಪೂಜೆಯಲ್ಲಿ ರೆ.ಫಾ. ಡೆರಿಲ್ ಫೆರ್ನಾಂಡಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಹಾಗೂ ಮಕ್ಕಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡಿದ ಶಿಕ್ಷಕಿ ಲಿಝೀ ಫೆರ್ನಾಂಡಿಸ್, ಸಹಾಯಕ ಶಿಕ್ಷಕಿ ರೆನಿಟಾ ಟೆಲ್ಲಿಸ್ ಅವರು ಉಪಸ್ಥಿತರಿದ್ದರು.