ಇತ್ತೀಚಿನ ಸುದ್ದಿ
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ
03/05/2024, 11:20
ಕಾಸರಗೋಡು(reporterkarnataka.com): ಮಗಳ ಮದುವೆಯ ಮದಿರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಇತ್ತ ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಾಸರಗೋಡು ಸಮೀಪದ ಮುಳ್ಳೇರಿಯಾದಲ್ಲಿ ನಡೆದಿದೆ.
ಮುಳ್ಳೇರಿಯ ಸಮೀಪದ ಕಾರ್ಲೆ ನಿವಾಸಿ ರಾಜ ರಾವ್ (51) ಮೃತಪಟ್ಟ ವ್ಯಕ್ತಿ. ರಾಜ ರಾವ್ ಅವರ ಮಗಳ ಮದುವೆ ಮೇ 2ರಂದು ಕರ್ಮಂತೋಡಿಯ ಆಡಿಟೋರಿಯಂನಲ್ಲಿ ನಡೆಯಲಿತ್ತು. ಮದುವೆಯ ಹಿಂದಿನ ದಿನ ಮದರಂಗಿ ಶಾಸ್ತ್ರ ಮನೆಯಲ್ಲಿ ಏರ್ಪಡಿಸಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದಂತೆ ರಾಜ ರಾವ್ ಅವರು ತನ್ನ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದರು. ಅವರ ಮೊಬೈಲಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಇದರಿಂದ ಹುಡುಕಾಟ ನಡೆಯುತ್ತಿದ್ದಾಗ ಅವರ ಸ್ಕೂಟರ್ ದೇಲಂಪಾಡಿ ಬಳಿ ಪತ್ತೆಯಾಗಿತ್ತು. ನಂತರ ತೀವ್ರ ಹುಡುಕಾಟ ನಡೆಸುತ್ತಿದ್ದಂತೆ ದೇಲಂಪಾಡಿ ಸಮೀಪ ಮರದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ದೀಪ್ತಿ, ದೀಕ್ಷಾ ಅವರನ್ನು ಅಗಲಿದ್ದಾರೆ.
ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.