ಇತ್ತೀಚಿನ ಸುದ್ದಿ
ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ
25/04/2024, 18:48
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಕರಾವಳಿಯ ದ.ಕ. ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಾಳೆ (ಏಪ್ರಿಲ್ 26ರಂದು) ನಡೆಯಲಿದ್ದು, ಚುನಾವಣಾ ಸಿಬ್ಬಂದಿಗಳು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಜತೆ ನಗರದ ಉರ್ವ ಕೆನರಾ ಹೈಸ್ಕೂಲಿನಿಂದ ಇಂದು ಸಂಜೆ ಮತಗಟ್ಟೆಗೆ ತೆರಳಿದರು.
ಜಿಲ್ಲೆಯಾದ್ಯಂತ 1876 ಮತಗಟ್ಟೆಗಳಿದ್ದು, ಒಟ್ಟು11, 255 ಮಂದಿ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ ಅಧಿಕಾರಿಗಳು ಕೂಡ ಸೇರಿದ್ದಾರೆ. 2251 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇಂದು ಬೆಳಗ್ಗೆಯೇ ನಗರದ ಉರ್ವ ಕೆನರಾ ಹೈಸ್ಕೂಲಿನಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಕೊನೆಯ ಹಂತದ ಸಿದ್ದತೆಗಳನ್ನು ನಡೆಸಲಾಯಿತು. ಜಿಲ್ಲಾದ್ಯಂತವಿರುವ 1876 ಮತಗಟ್ಟೆಗಳಿಗೆ ಇವಿಎಂ ಮೆಷಿನೊಂದಿಗೆ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ವಾಹನದಲ್ಲಿ ಭದ್ರತೆಯೊಂದಿಗೆ ಕಳುಹಿಸಿಕೊಡಲಾಯಿತು.