ಇತ್ತೀಚಿನ ಸುದ್ದಿ
ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’ ಟು ಕಣ್ಣೂರು ರೋಡ್ ಶೋ
24/04/2024, 22:05
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಲೋಕಸಭೆ ಚುನಾವಣೆಯ ಕೊನೆ ದಿನವಾದ ಬುಧವಾರ ಮಂಗಳೂರಿನ ಪಂಪ್’ವೆಲ್’ನಿಂದ ಕಣ್ಣೂರುವರೆಗೆ ರೋಡ್ ಶೋ ಜರಗಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಸದಸ್ಯ ಐವನ್ ಡಿಸೋಜ,
ವಿರೋಧ ಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ,ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ,ಅಶ್ರಫ್ ಕೇಶವ ಮರೋಳಿ, ನವೀನ್ ಡಿಸೋಜ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಯು.ಟಿ. ಫರ್ಜಾನ್, ರವಿರಾಜ್ ಪೂಜಾರಿ, ರಮಾನಂದ್ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ಲಾರೆನ್ಸ್ ಡಿ.ಡಿಸೋಜಾ, ಸುಧಾಕರ್ ಜಪ್ಪಿನ ಮೊಗರು ಮೊದಲಾದವರು ಉಪಸ್ಥಿತರಿದ್ದರು.
*ಗರೋಡಿ, ದರ್ಗಾ ಭೇಟಿ:
ರೋಡ್ ಶೋ ನಡುವೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ, ಅಡ್ಯಾರ್ ಕಣ್ಣೂರು ಶೇಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್’ಗೆ ಭೇಟಿ ನೀಡಿದರು.