ಇತ್ತೀಚಿನ ಸುದ್ದಿ
ಬಿಗ್ ಬ್ಯಾಗ್ಸ್, ಥ್ರೆಡ್ ವಿಷನ್ ಸಂಸ್ಥೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ
24/04/2024, 12:23
ಮಂಗಳೂರು(reporterkarnataka.com): ಗಂಜಿಮಠ ಬಿಗ್ ಬ್ಯಾಗ್ಸ್ ಇಂಟರ್ ನ್ಯಾಷನಲ್ ಪ್ರೈ ಲಿ. ಹಾಗೂ ಥ್ರೆಡ್ ವಿಷನ್ ಸಂಸ್ಥೆಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ಸಿಬ್ಬಂದಿಗಳ ಜೊತೆ ಗ್ಯಾರೆಂಟಿ ಯೋಜನೆ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಮತ ಯಾಚಿಸಿದರು.
ಬಿಗ್ ಬ್ಯಾಗ್ಸ್ ಸಂಸ್ಥೆಯ ಜಿಎಂ ಶ್ರೀನಾಥ್ ಅಡ್ಯಂತಾಯ, ಎಚ್.ಆರ್. ಮಮತಾ, ಥ್ರೆಡ್ ವಿಷನ್ ಸಂಸ್ಥೆಯ ಎಂ.
. ಸುಭಾಷ್, ಮ್ಯಾನೇಜರ್ ದಿನೇಶ್, ಮರ್ಚಂಡೈಸರ್ ಪೃಥ್ವಿರಾಜ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಬಿ.ಎಲ್. ಪದ್ಮನಾಭ, ನೀಲಯ್ಯ, ಪೃಥ್ವಿರಾಜ್ ಆರ್.ಕೆ., ಗಿರೀಶ್ ಆಳ್ವ, ಮಾಲತಿ ಮೊದಲಾದವರು ಉಪಸ್ಥಿತರಿದ್ದರು.