ಇತ್ತೀಚಿನ ಸುದ್ದಿ
ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ
24/04/2024, 12:17
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ, ದೇವನೂರು, ಗಟ್ಟವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಶಾಸಕ ಹರ್ಷವರ್ಧನ್ ಅವರು ಬಿಜೆಪಿ ಅಭ್ಯರ್ಥಿ ಬಾಲರಾಜು ಪರ ಮತಯಾಚನೆ ಮಾಡಿದರು.
ಗ್ರಾಮ, ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡಿ ಕರಪತ್ರ ನೀಡುವ ಮೂಲಕ ಅಭ್ಯರ್ಥಿ ಬಾಲರಾಜ್ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಬಳಿಕ ಅವರು ಮಾತನಾಡಿ ಕಳೆದ ಹತ್ತು ತಿಂಗಳ ಹಿಂದೆ ಮಾಡಿದ ತಪ್ಪನ್ನು ಈಗ ಮಾಡಬೇಡಿ ಕ್ಷೇತ್ರಕ್ಕೆ ನಾವು ಮಾಡಿದ ಅಭಿವೃದ್ಧಿಯನ್ನು ಮರೆತು ಬಿಜೆಪಿಯನ್ನು ಸೋಲಿಸಿ ಈಗ 10 ತಿಂಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ತಾವೇ ವ್ಯಥೆ ಪಡುವಂತಾಗಿದೆ. ಈ ಚುನಾವಣೆಯಲ್ಲಿ ಅಂತಹ ತಪ್ಪು ಮಾಡದೆ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹಾಗೂ ಮೋದಿಯವರ ಕೈ ಬಲಪಡಿಸಬೇಕು. ದೇಶ ಮತ್ತು ರಾಜ್ಯ ಅಭಿವೃದ್ಧಿ ಆಗ ಬೇಕಾದರೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಎಂದು ಕಾರ್ಯಕರ್ತ ಮುಖಂಡರಲ್ಲಿ ಮನವಿ ಮಾಡಿಕೊಂಡರು.
ನಿಕಟಪೂರ್ವ ಮಂಡಲ ಅಧ್ಯಕ್ಷ ವಕೀಲ ಮಹೇಶ್ ಮಾತನಾಡಿ ಮಾಜಿ ಶಾಸಕರು ನಮ್ಮ ಕ್ಷೇತ್ರಕ್ಕೆ ಹಾಗೂ ನಮ್ಮ ಗ್ರಾಮಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದರು. ಆದರೆ ಅದನ್ನು ಸ್ಮರಿಸದೆ ಯಾವುದೋ ಕಾರಣಕ್ಕೆ ಅವರನ್ನು ಸೋಲಿಸಿದ್ದು ನಿಜಕ್ಕೂ ವಿಷಾದನೀಯ. ಆದರೆ ಈಗ ಆ ತಪ್ಪು ಮಾಡದೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರಿಗೆ ಮತ ನೀಡುವಂತೆ ಕೇಳಿಕೊಂಡರು.
ಪ್ರಚಾರಕ್ಕೆ ಬಂದ ಮಾಜಿ ಶಾಸಕರು ಹಾಗೂ ಮುಖಂಡರನ್ನು ಗ್ರಾಮಸ್ಥರು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು
ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ಮಾಜಿ ಅಧ್ಯಕ್ಷ ಹೊರಳವಾಡಿ ಮಹೇಶ್, ಬದನವಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಶಾಮ್ ಪಟೇಲ್, ರಂಗನಾಥ್, ಹೆಮ್ಮರಗಾಲ ಸೋಮಣ್ಣ, ಶಿವಣ್ಣ, ಮುಳ್ಳೂರು ಶೇಖರ್,ಮಸಗೆರಾಜು, ಮಹದೇವಸ್ವಾಮಿ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.