ಇತ್ತೀಚಿನ ಸುದ್ದಿ
ಪೆರ್ಮಾಯ್ ಚರ್ಚಿನ ಧರ್ಮಗುರುಗಳ ಧರ್ಮದೀಕ್ಷೆಯ 40ನೇ ವರ್ಷಾಚರಣೆ: ಇಂದು ಅಭಿನಂದನಾ ಕಾರ್ಯಕ್ರಮ
24/04/2024, 09:35
ಮಂಗಳೂರು(reporterkarnataka.com): ಮಂಗಳೂರಿನ ಪೆರ್ಮಾಯ್ ಚರ್ಚಿನ ಧರ್ಮಗುರುಗಳಾದ ವಂ. ಫಾ. ಡಾ. ಮಾರ್ಕ್ ಕ್ಯಾಸ್ಟಲಿನೊ ಅವರು ತಮ್ಮ ಧರ್ಮದೀಕ್ಷೆಯ 40ನೇ(ರೂಬಿ ಜುಬಿಲಿ) ವರ್ಷಾಚರಣೆಯನ್ನು ಇಂದು (ಏಪ್ರಿಲ್ 24ರಂದು) ಆಚರಿಸಲಿದ್ದಾರೆ.
ಇಂದು ಸಂಜೆ 6 ಗಂಟೆಗೆ ಸಂತ ಅಂತೋನಿ ಚರ್ಚಿನಲ್ಲಿ ಬಲಿಪೂಜೆ ಹಾಗೂ ನಂತರ ಚರ್ಚಿನ ವಠಾರದಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಲಿದೆ ಎಂದು ಚರ್ಚ್ ಪ್ರಕಟಣೆ ತಿಳಿಸಿದೆ.