ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್ ಶೆಟ್ಟಿ
22/04/2024, 21:35
ಮಂಗಳೂರು(reporterkarnataka.com): ದಿನ ಬೆಳಗಾದರೆ ಗ್ಯಾರಂಟಿ ಗ್ಯಾರಂಟಿ ಎನ್ನುವ ಸಿದ್ದರಾಮಯ್ಯ ಸರಕಾರ, ನಿಜವಾಗಿಯೂ ಕೊಟ್ಟಿರುವುದು ಬಹುಸಂಖ್ಯಾತ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಯ ಗ್ಯಾರಂಟಿ, ಲವ್ ಜಿಹಾದ್ ಗ್ಯಾರಂಟಿ, ಮಹಿಳೆಯರ ಮಾನ-ಪ್ರಾಣ ಹರಣದ ಗ್ಯಾರಂಟಿ ಮತ್ತು ಭ್ರಷ್ಟಾಚಾರ, ಲೂಟಿಯ ಗ್ಯಾರಂಟಿ ಮಾತ್ರ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿರಹಿತ, ದೂರದೃಷ್ಟಿಯಿಲ್ಲದ, ರಾಜ್ಯದ ಜನತೆಗೆ ಯಾವುದೇ ರೀತಿಯ ನೆಮ್ಮದಿ ನೀಡದ ಸರಕಾರವಿದು ಎಂದು ತರಾಟೆಗೆ ತೆಗೆದುಕೊಂಡರು.
*ಅವರ ಮಾತಿನ ಝಲಕ್, ಹೈಲೈಟ್ಸ್ ಇಲ್ಲಿದೆ:*
ಗ್ಯಾರಂಟಿ ಗ್ಯಾರಂಟಿ ಅನ್ನುವ ಮಾತನ್ನು ಹೇಳುತ್ತಿದ್ದಾರಲ್ಲ, ಯಾವುದರ ಗ್ಯಾರಂಟಿ ಬಗ್ಗೆ ಮಾತಾಡ್ತಾರೆ ಇವರು? ಇಡೀ ಕರ್ನಾಟಕದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಗ್ಯಾರಂಟಿ ಇಲ್ಲ, ಮಹಿಳೆಯರ ಮಾನ ಪ್ರಾಣ ರಕ್ಷಣೆಯ ಗ್ಯಾರಂಟಿ ಇಲ್ಲ. ಕುಡಿಯುವ ನೀರಿಗೂ ಗ್ಯಾರಂಟಿ ಇಲ್ಲ, ರೈತರ ಬದುಕಿಗೂ ಗ್ಯಾರಂಟಿ ಇಲ್ಲ; ಯಾವ ಗ್ಯಾರಂಟಿಗಳನ್ನು ಕೊಟ್ಟು ಸಿದ್ದರಾಮಯ್ಯ ಸರಕಾರ ಯಾವುದನ್ನೂ ಸರಿಯಾಗಿ ಜಾರಿ ಮಾಡಿಲ್ಲ. ಪರಿಶೀಲನೆ ಮಾಡಿದರೆ- ಹಿಂದೂಗಳ ಭಾವನೆಗಳಿಗೆ ಯಾವುದೇ ರೀತಿಯ ಗ್ಯಾರಂಟಿ ಇಲ್ಲ, ಸ್ತ್ರೀಯರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ತುಷ್ಟೀಕರಣದ ನೀತಿಯನ್ನು ಮಾತ್ರ ಮುಂದಿಟ್ಟುಕೊಂಡು ಸಿದ್ದರಾಮಯ್ಯನವರು ಸರಕಾರ ಮುನ್ನಡೆಸುತ್ತಿದ್ದಾರೆ. ದಿನ ಬೆಳಗಾದರೆ ಎಲ್ಲೋ ಒಂದು ಕಡೆ ಜಿಹಾದಿಗಳ ಅಟ್ಟಹಾಸ ಇಡೀ ಕರ್ನಾಟಕದಲ್ಲಿ ಕೇಳಿಸುತ್ತಿದೆ ಎಂದು ಶಾಸಕರು ಮಾತಿನ ಏಟು ನೀಡಿದರು.
* ಜಿಹಾದಿಗಳ ಅಟ್ಟಹಾಸಕ್ಕೆ ಯಾವುದೇ ರೀತಿಯಾದ ನ್ಯಾಯಯುತ ಸ್ಪಂದನೆ ಸರಕಾರದಿಂದ ಆಗುತ್ತಿಲ್ಲ. ನೇಹಾ ಹಿರೇಮಠರ ಹತ್ಯೆ. ಕಾಂಗ್ರೆಸ್ ಕಾರ್ಪೊರೇಟರ್ ಒಬ್ಬರ ಮಗಳು ಕಾಲೇಜಿನಲ್ಲಿ ಎಲ್ಲರ ಸಮ್ಮುಖದಲ್ಲಿ ಈ ರೀತಿ ಹತ್ಯೆಯಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆಯನ್ನು ಗಮನಿಸಿದರೆ- ಹಿಂದೂಗಳ ಜೀವದ ಮೇಲೆ, ಹಿಂದೂ ಮಹಿಳೆಯರ ಮಾನ-ಪ್ರಾಣದ ಮೇಲೆ ಇವರಿಗೆ ಯಾವ ರೀತಿಯ ಗೌರವವೂ ಇಲ್ಲದ ಹಾಗೆ ಕಾಣುತ್ತದೆ. ಬರೀ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿಯೇ ಸರಕಾರ ನಡೆಸುತ್ತಿರುವುದು ಕಾಣುತ್ತದೆ.
ಸ್ವಂತ ಪಕ್ಷದ ಕಾರ್ಪೊರೇಟರ್‍ನ ಮಗಳ ಹತ್ಯೆ ಆದಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನೂ ಸಿದ್ದರಾಮಯ್ಯ ಆಗಲಿ, ಪರಮೇಶ್ವರ್ ಆಗಲಿ ಮಾಡಿಲ್ಲ. ಅವರದೇ ಕಾರ್ಯಕರ್ತ, ನಾಯಕನ ಮಗಳ ಹತ್ಯೆ ಆದಾಗಲೂ ಹೀಗಾಗುವುದು, ಹೋದರೆ ಅಲ್ಪಸಖ್ಯಾತರಿಗೆ ಎಲ್ಲಿ ಬೇಸರವಾಗುತ್ತದೋ ಎಂಬ ನಡವಳಿಕೆ ಖಂಡನೀಯ.
* ನಮ್ಮ ನಾಯಕರು ಪಕ್ಷಾತೀತವಾಗಿ ಕಾಂಗ್ರೆಸ್ ಕಾರ್ಪೊರೇಟರ್ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಈ ಕೊಲೆ ಎಲ್ಲೋ ಅಪರೂಪಕ್ಕೆ ನಡೆದ ಘಟನೆಯಲ್ಲ. ಒಂದರ ಹಿಂದೆ ಒಂದರಂತೆ ಈ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಜಿಹಾದಿ ಶಕ್ತಿಗಳು ಈ ರೀತಿಯ ಅಟ್ಟಹಾಸ ಮೆರೆಯಲು ಹಿಂದಿನಿಂದ ಅವರಿಗೆ ಮಾನಸಿಕ ಸ್ಥೈರ್ಯ ಕೊಡುತ್ತಿರುವುದು ಸಿದ್ದರಾಮಯ್ಯ ಸರಕಾರ. ಅದರಿಂದಾಗಿಯೇ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ.
* ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಜಿಹಾದಿ ಶಕ್ತಿಗಳು ಆತನ ಮೇಲೆ ಕಾರು ಹರಿಸಿ ಹತ್ಯೆ ಮಾಡಿದರು. ಈ ಕೃತ್ಯ ಎಸಗಿದವರು ಇಬ್ಬರು ಅಲ್ಪಸಂಖ್ಯಾತರು. ಅವರ ಮೇಲೆ ಸರಿಯಾದ ಕ್ರಮ ಜರುಗಿಸಬೇಕಾದ್ದು ಸರಕಾರದ ಕರ್ತವ್ಯ. ಇದನ್ನೆಲ್ಲ ಕಡೆಗಣಿಸಿ ಬೇರೆ ರತಿಯ ವರ್ತನೆ ಮಾಡುತ್ತಿದೆ ಸರಕಾರ.
* ಯಾದಗಿರಿಯಲ್ಲಿ ಇವತ್ತು ಒಬ್ಬ ದಲಿತನನ್ನು ಒಬ್ಬ ಅಲ್ಪಸಂಖ್ಯಾತ ವರ್ಗದ ವ್ಯಕ್ತಿ ಕೊಲೆ ಮಾಡಿದ್ದಾನೆ. ಇಂತಹ ಕೃತ್ಯ ನಡೆದಾಗ ಆರೋಪಿಯನ್ನು ಅಲ್ಪಸಂಖ್ಯಾತನೆಂಬ ನೆಲೆಯಲ್ಲಿ ರಕ್ಷಿಸುವ ಕಾರ್ಯ ನಡೆಸಲಾಗುತ್ತಿದೆ. ನ್ಯಾಯ-ಅನ್ಯಾಯ ಎಂಬ ವಿಚಾರ ಬಿಟ್ಟು, ಕೃತ್ಯ ಎಸಗಿದವನ ಮತ ಯಾವುದು, ಅದರಿಂದ ತಮಗೆ ರಾಜಕೀಯ ಲಾಭ ಏನಾದರೂ ಆಗುವುದಾ ಎಂದು ನೋಡುವ ಕಾಂಗ್ರೆಸ್‌ನ ಮನಸ್ಥಿತಿ ಅತ್ಯಂತ ಅಪಾಯಕಾರಿ.
* ರಾಮನವಮಿ ದಿನ ಜೈಶ್ರೀರಾಮ ಎಂದು ತಮ್ಮಷ್ಟಕ್ಕೇ ಘೊಷಣೆ ಕೂಗಿಕೊಂಡು ಬಂದ ಯುವಕರನ್ನು ನಿಲ್ಲಿಸಿ ಬೆದರಿಕೆ ಹಾಕಿದ, ಅವರಿಂದ ಅಲ್ಲಾಹು ಅಕ್ಬರ್ ಎಂಬ ಘೊಷಣೆ ಕೂಗುವಂತೆ ಒತ್ತಾಯಿಸಿದ ಘಟನೆ ಮೈಸೂರಿನಲ್ಲಿ ನಡೆದಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ.
* ನರೇಂದ್ರ ಮೋದಿಯವರ ಪರವಾಗಿ ಹಾಡನ್ನು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿರುವುದು, ಮೈಸೂರು ಸರಕಾರಿ ಅತಿಥಿ ಗೃಹದ ಬಳಿ ಲಕ್ಷ್ಮೀನಾರಾಯಣ ಎಂಬವರ ಮೇಲೆ ಹಲ್ಲೆ ಮಾಡಿ ಮತಾಂಧರು ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವಂತೆ ಒತ್ತಡ ಹೇರಿದ್ದು,, ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿಯ ಮೇಲೆ ಆದ ಹಲ್ಲೆ- ನಾವು ಪಾಕಿಸ್ತಾನದಲ್ಲಿದ್ದೇವಾ, ತಾಲಿಬಾನ್ ಆಡಳಿತದಲ್ಲಿದ್ದೇವಾ ಎಂದು ಅವರು ಹೇಳುವಂತೆ ಮಾಡಿದ ಪರಿಸ್ಥಿತಿ, ಇವನ್ನೆಲ್ಲ ನಾವು ನೆನಪಿಸಿಕೊಳ್ಳಬೇಕು. ಯಾಕೆ ಕರ್ನಾಟಕದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯುತ್ತಿವೆ? ಇದಕ್ಕೆಲ್ಲ ಕುಮ್ಮಕ್ಕು, ಧೈರ್ಯ ಕೊಟ್ಟವರು ಯಾರು ಎಂದು ಪ್ರಶ್ನಿಸಬೇಕಾಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ.
* ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಆಗಲೂ ನೀರಸ ಪ್ರತಿಕ್ರಿಯೆಯನ್ನು ಸರಕಾರ ಕೊಟ್ಟಿತ್ತು. ಬೆಳಗಾವಿ ತಾಲೂಕಿನ ಮಂಟಮರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಕಳವಳಕಾರಿ ಘಟನೆಯನ್ನೂ ಮುಚ್ಚಿಹಾಕುವ ಕೆಲಸ ಮಾಡಿದರು.
* ಶಿವಮೊಗ್ಗದಲ್ಲಿ ಔರಂಗಜೇಬ್ ದ್ವಾರ ನಿರ್ಮಿಸಿ ಭಯ ಹುಟ್ಟಿಸಿದರು, ಕೋಲಾರದಲ್ಲಿ ತಲವಾರಿನ ಕಟೌಟ್ ನಿರ್ಮಿಸಿ ಆತಂಕ ಸೃಷ್ಟಿಸಿದ ಘಟನೆ ಮತ್ತು ಅವರಗೆ ಕಾಂಗ್ರೆಸ್ ನಾಯಕರು ಬೆಂಬಲ ನಿಡಿದ ಘಟನೆ, ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಕರಸೇವಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿ ಕಿರುಕುಳ ನೀಡಿದ್ದು, ಮಂಡ್ಯದ ಕೆರಗೋಡು ಗ್ರಾಮದಲ್ಲಿ 108 ಅಡಿಯ ಕೇಸರಿ ಧ್ವಜ ಹಾಕಿದ್ದನ್ನು ಪೊಲೀಸರ ಮೂಲಕ ಬಲಪ್ರಯೋಗ ಮಾಡಿ ತೆಗೆಸಿದ್ದು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ಇವ್ಯಾವುದನ್ನೂ ಜನರು ಮರೆತಿಲ್ಲ. ಬೆಂಗಳೂರಿನ ನಗರ್ತಪೇಟೆಯಲ್ಲಿ ತನ್ನ ಅಂಗಡಿಯಲ್ಲಿ ಹನುಮನ್ ಚಾಲೀಸ ಹಾಕಿದ್ದಕ್ಕೆ ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡಿ ಅಂಗಡಿ ಧ್ವಂಸ ಮಾಡಿದ ಘಟನೆ, ಇವೆಲ್ಲ ಯಾವುದರ ಸಂಕೇತ?
* ಗ್ಯಾರಂಟಿ ಗ್ಯಾರಂಟಿ ಅನ್ನುವ ಮಾತನ್ನು ಹೇಳುತ್ತಿದ್ದಾರಲ್ಲ, ಯಾವುದರ ಗ್ಯಾರಂಟಿ ಬಗ್ಗೆ ಮಾತಾಡ್ತಾರೆ ಇವರು? ಇಡೀ ಕರ್ನಾಟಕದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಗ್ಯಾರಂಟಿ ಇಲ್ಲ, ಮಹಿಳೆಯರ ಮಾನ ಪ್ರಾಣ ರಕ್ಷಣೆಯ ಗ್ಯಾರಂಟಿ ಇಲ್ಲ. ಕುಡಿಯುವ ನೀರಿಗೂ ಗ್ಯಾರಂಟಿ ಇಲ್ಲ, ರೈತರ ಬದುಕಿಗೂ ಗ್ಯಾರಂಟಿ ಇಲ್ಲ; ಸಿದ್ದರಾಮಯ್ಯ ಅವರ ಹಿಂದಿನ ಸರಕಾರದ ಅವಧಿಯಲ್ಲಿ 3,600 ರೈತರು ಆತ್ಮಹತ್ಯೆ ಮಾಡಿಕೊಂಡರು. ಈಗಿನ ಸರಕಾರದ ಅವಧಿಯಲ್ಲಿ ಒಂದು ವರ್ಷದೊಳಗೆ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಕಾರದಿಂದ ಪರಿಹಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಎಂಬ ಬೇಜವಾಬ್ದಾರಿಯ ಹೇಳಿಕೆಯನ್ನು ಅವರ ಮಂತ್ರಿಗಳು ನೀಡುತ್ತಾರೆ.
*ಯಾವುದಕ್ಕೆ ಗ್ಯಾರಂಟಿ?*
* ಅಲ್ಪಸಂಖ್ಯಾತರಿಗೆ ಸಾಲದ ಗ್ಯಾರಂಟಿ ಇದೆ. ಅಲ್ಪಸಂಖ್ಯಾತರ ಯೋಜನೆಗಳಿಗೆ ಗ್ಯಾರಂಟಿ ಇದೆ. ಮತಾಂಧರಿಗೆ ಈ ರೀತಿಯ ಕೆಲಸಗಳನ್ನು ಮಾಡಿದರೆ ರಕ್ಷಣೆಯ ಗ್ಯಾರಂಟಿ ಮಾತ್ರ ಇದೆ. ಲವ್ ಜಿಹಾದ್‌ಗೂ ಗ್ಯಾರಂಟಿ ಇದೆ. ಗಲಭೆ ಕೋರರಿಗೆ, ಭಯೋತ್ಪಾದಕರಿಗೆ ಕೇಸು ರದ್ದು ಮಾಡುವ ಗ್ಯಾರಂಟಿ ಕೊಟ್ತಾರೆ; ಪುನಃ ಇಂತಹ ಕೆಲಸಗಳನ್ನು ಮಾಡಿದರೆ ತೊಂದರೆಯೇನೂ ಇಲ್ಲ ಎನ್ನುವಂತ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ.
ವಿದ್ಯುತ್, ಆಸ್ತಿ ತೆರಿಗೆ, ಮದ್ಯ ಸೇರಿದಂತೆ ಎಲ್ಲ ದರಗಳ ಹೆಚ್ಚಳ, ಜನರಿಂದ ಸುಲಗೆ ಗ್ಯಾರಂಟಿ ಯನ್ನು ಮಾತ್ರ ಸರಕಾರ ಕೊಟ್ಟಿದೆ. ಕರ್ನಾಟಕದಲ್ಲಿ ಶಾಸಕರ ನಿಧಿ ಸಹ ಯಾರಿಗೂ ಬಂದಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ, ಬಂಡವಾಳ ವೆಚ್ಚದ ಕೆಲಸ ಆಗುತ್ತಿಲ್ಲ. ಎಲ್ಲಿ ನೋಡಿದರೂ ಜಿಹಾದಿ ಶಕ್ತಿಗಳಿಗೆ ಪ್ರಚೋದನೆ, ಪ್ರೋತ್ಸಾಹ ಕೊಡುವ ಕೆಲಸ ಆಗುತ್ತಿದೆ. ಗೃಹಸಚಿವರು ಅತ್ಯಂತ ಸಂವೇದನಾರಹಿತರಾಗಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಹೆಚ್ಚು ಹೆಚ್ಚು ಜಿಹಾದಿ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಒಟ್ಟಾರೆಯಾಗಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮತ್ತು ತುಷ್ಟೀಕರಣದ ನೀತಿಯನ್ನು ಬಿಟ್ಟರೆ ಕರ್ನಾಟಕದಲ್ಲಿ ಬೇರೆ ಯಾವುದೇ ರೀತಿಯ ಬೆಳವಣಿಗೆ ಕಾಣುತ್ತಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಖಜಾಂಚಿ ಸಂಜಯ್ ಪ್ರಭು ಹಾಗೂ ಮಾಧ್ಯಮ ಸಂಚಾಲಕರಾದ ಕದ್ರಿ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.