ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಗಳ ಕಿರಿಕಿರಿ ತಪ್ಪಿಸಲು ಪೊಲೀಸ್ ಕಾರ್ಯಾಚರಣೆ: ಹಾರ್ನ್ ಕಿತ್ತೆಸೆದು ದಂಡ
20/04/2024, 14:00
ಮಂಗಳೂರು(reporterkarnataka.com):ನಗರದಲ್ಲಿ ಕರ್ಕಶ ಹಾರ್ನ್ ಗಳ ವಿರುದ್ಧ ಎಸಿಪಿ ನಜ್ಮಾ ಫಾರೂಕಿ ತಂಡ ಫೀಲ್ಡ್ ಗಿಳಿದು ಕಾರ್ಯಾಚರಣೆ ನಡೆಸಿದೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ನಿರ್ದೇಶನದಂತೆ, ಡಿಸಿಪಿ ನೇತೃತ್ವದಲ್ಲಿ, ನಗರಾದ್ಯಂತ ಕರ್ಕಶ ಹಾರ್ನ್ ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರು ನಗರ ವಿವಿಧ ಟ್ರಾಫಿಕ್ ಸ್ಟೇಷನ್ ವ್ಯಾಪ್ತಿಯಲ್ಲಿ 2 ದಿನಗಳಿಂದ ಬಸ್, ಟ್ರಕ್, ಲಾರಿ ಗಳ ಕರ್ಕಶ ಹಾರ್ನ್ ಗಳನ್ನು ಕಿತ್ತೆಸೆದು ದಂಡ ವಿಧಿಸಲಾಗುತ್ತಿದೆ.