ಇತ್ತೀಚಿನ ಸುದ್ದಿ
ಲೋಕಸಭೆ ಚುನಾವಣೆ: 5.65 ಕೋಟಿ ರೂ. ಮೌಲ್ಯದ 1.42 ಲಕ್ಷ ಲೀಟರ್ ಮದ್ಯ, 8.69 ಲಕ್ಷ ಮೌಲ್ಯದ 15.5 ಕೆಜಿ ಡ್ರಗ್ಸ್ ವಶ; ಒಟ್ಟು 1022 ಪ್ರಕರಣ ದಾಖಲು
18/04/2024, 21:12
ಮಂಗಳೂರು(reporterkarnataka.com): 2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏ.17ರವರೆಗೆ ಜಿಲ್ಲೆಯಲ್ಲಿ 5,65,72,108 ರೂಪಾಯಿ ಮೌಲ್ಯದ 1,42,442 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 1022 ಎಫ್.ಐ.ಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.