ಇತ್ತೀಚಿನ ಸುದ್ದಿ
ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು
17/04/2024, 17:38
ಮಂಗಳೂರು(reporterkarnataka.com):ಮಂಗಳೂರು – ಬೆಂಗಳೂರು ರಾ.ಹೆ 73ರ ವಳಚ್ಚಿಲ್ ಸಹ್ಯಾದ್ರಿ ಕಾಲೇಜಿನ ಎದುರು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬೆಳ್ತಂಗಡಿಯ ನಿವಾಸಿ ಮಹೇಶ್ (20) ಮೃತಪಟ್ಟ ವಿದ್ಯಾರ್ಥಿ. ಮಹೇಶ್ ಅವರು ಇನ್ನೋರ್ವ ವಿದ್ಯಾರ್ಥಿ ಪ್ರಣಮ್ ಶೆಟ್ಟಿ ಅವರೊಂದಿಗೆ ಬೈಕ್‌ನಲ್ಲಿ ಟ್ಯೂಷನ್ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅವರ ಬೈಕ್‌ಗೆ ಕಾರು ಡಿಕ್ಕ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಸಹ್ಯಾದ್ರಿ ಕಾಲೇಜು ಎದುರಿನ ಡಿವೈಡರ್ ಬಳಿ ಯು ಟರ್ನ್ ಪಡೆದು ಮುಂದಕ್ಕೆ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಹೇಶ್ ಮೃತಪಟ್ಟಿದ್ದಾರೆ. ಪ್ರಣಮ್ ಗಾಯಗೊಂಡಿದ್ದಾರೆ. ಮಹೇಶ್ ಸಹ್ಯಾದ್ರಿ ಕಾಲೇಜಿನ ರೊಬೊಟಿಕ್ ವಿಭಾಗದ ವಿದ್ಯಾರ್ಥಿ.