ಇತ್ತೀಚಿನ ಸುದ್ದಿ
ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ ಅಭ್ಯರ್ಥಿ ಕೋಟ ಪರ ಮತಯಾಚನೆ
17/04/2024, 15:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಚಿಕ್ಕಮಗಳೂರಿನ ಮೂಡಿಗೆರೆಯ ಬಿದರಹಳ್ಳಿ ಗ್ರಾಮದಲ್ಲಿರುವ ರಾಮೇಶ್ವರ ದೇಗುಲಕ್ಕೆ ರಾಮನವಮಿಯಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಭೇಟಿ ನೀಡಿ ರಾಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚುನಾವಣಾ ಪ್ರಚಾರ ಸಭೆಗೂ ಮುನ್ನ ರಾಮೇಶ್ವರನ ದರ್ಶನ ಮಾಡಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರವಾಗಿ ಮಾಜಿ ಪ್ರಧಾನಿ ಪ್ರಚಾರ ನಡೆಸಿದರು. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಾಜಿ ಪ್ರಧಾನಿಗೆ ಸಾಥ್ ನೀಡಿದರು. ನಂತರ ಬಿಜೆಪಿ-ಜೆಡಿಎಸ್ ಮುಖಂಡರೊಂದಿಗೆ ದೇವೇಗೌಡ ಅವರು ಸಭೆ ನಡೆಸಿದರು. ಕೋಟ ಶ್ರೀನಿವಾಸ್ ಪೂಜಾರಿ ಬೆಂಬಲಿಸುವಂತೆ ಮನವಿ ಮಾಡಿದರು. ಮೂಡಿಗೆರೆ ಪಟ್ಟಣದ ಅಡ್ಯಂತಾಯ ಬಯಲು ಮಂದಿರದಲ್ಲಿ ಪ್ರಚಾರ ಸಭೆ ನಡೆಯಿತು.