ಇತ್ತೀಚಿನ ಸುದ್ದಿ
ಉಳ್ಳಾಲ, ಮಂಜನಾಡಿಯಲ್ಲಿ ಕಾಂಗ್ರೆಸ್ ರೋಡ್ ಶೋಗೆ ಅಭೂತಪೂರ್ವ ಜನಬೆಂಬಲ: ಪಟಾಕಿ ಸಿಡಿಸಿ ಸಂಭ್ರಮ
15/04/2024, 21:22
ಉಳ್ಳಾಲ(reporterkarnataka.com): ರೋಡ್ ಶೋ ಮೂಲಕ ನಡೆಸಿದ ಚುನಾವಣಾ ಪ್ರಚಾರ ಕಾರ್ಯ ಕಾಂಗ್ರೆಸ್’ಗೆ ಹೊಸ ಉತ್ಸಾಹ ತುಂಬುವಲ್ಲಿ ಸಫಲವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಸಂಜೆ ಹೊತ್ತಿಗೆ ಮುಡಿಪು ತಲುಪಿದ ರೋಡ್ ಶೋಗೆ ಕಾರ್ಯಕರ್ತರು, ಮುಖಂಡರು ಭರ್ಜರಿ ಸ್ವಾಗತ ಕೋರಿದರು. ಅಲ್ಲಿ ಪ್ರಚಾರ ಕಾರ್ಯ ನಡೆಸಿ, ಪೂಪಾಡಿಕಲ್ಲು, ನರಿಂಗಾನ, ಕೈರಂಗಳ, ಮಂಜನಾಡಿ, ನಾಟೆಕಲ್ಲು, ಕಿನ್ಯಾ, ಮೀನಾದಿ, ಮಿಂಪ್ರಿ ಮೊದಲಾದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.
ಅಭ್ಯರ್ಥಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೂಮಾಲೆ ಹಾಕಿ ಗೆಲುವಿಗೆ ಹಾರೈಸಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳುತ್ತಿದ್ದರೆ ತುಂಬಿದ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು.