1:28 PM Tuesday21 - May 2024
ಬ್ರೇಕಿಂಗ್ ನ್ಯೂಸ್
ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;…

ಇತ್ತೀಚಿನ ಸುದ್ದಿ

ದ.ಕ.ಲೋಕಸಭೆ: ತಗ್ಗಿತೇ ಬಿಜೆಪಿ ಪ್ರಚಾರ?: ದಿನ ಕಳೆದಂತೆ ಸ್ಟ್ರಾಂಗ್ ಆಗುತ್ತಿದೆಯೇ ಪದ್ಮರಾಜ್ ಟೀಮ್ ?

13/04/2024, 21:56

ಮಂಗಳೂರು(reporterkarnataka.com): ಸುಮಾರು 3 ದಶಕಗಳ ಇತಿಹಾಸದಲ್ಲೇ ದ.ಕ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಚಾರದ ಅಬ್ಬರ ತೀರಾ ತಗ್ಗಿಹೋಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಪ್ರಚಾರ ಏರುಗತಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿದೆ.
ಇದು ರಿಪೋರ್ಟರ್ ಕರ್ನಾಟಕ ಕಂಡ ನಿಷ್ಪಕ್ಷವಾದ ವಾಸ್ತವ ಚಿತ್ರಣ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಕುರಿತು ಅವರ ಪಕ್ಷದಲ್ಲೇ ಕೇಳಿ ಬಂದ ಅಪಸ್ವರ, ನಳಿನ್ ಬದಲಿಗೆ ಕ್ಯಾಪ್ಟನ್ ಬ್ರಜೇಶ್ ಚೌಟರಿಗೆ ಸಿಕ್ಕಿದ ಬಿಜೆಪಿ ಟಿಕೆಟ್, ಇಲ್ಲಿಂದಲೇ ಬಿಜೆಪಿಯೊಳಗೆ ಒಳಬೇಗುದಿ ಶುರುವಾಗಿತ್ತು. ಇದಕ್ಕೆ ತಕ್ಕಂತೆ ಕಾಂಗ್ರೆಸ್ ಬಹಳಷ್ಟು ಅಳೆದು ತೂಗಿ, ಜಾತಿ ಸಮೀಕರಣ ನಡೆಸಿ ಇದುವರೆಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದ ಪದ್ಮರಾಜ್ ರಾಮಯ್ಯ ಅವರನ್ನು ಅಖಾಡಕ್ಕಿಳಿಸಿತು. ಇದು ಬಿಜೆಪಿಯನ್ನು ಮೊದಲ ಹಂತದಲ್ಲೇ ತತ್ತರಿಸುವಂತೆ ಮಾಡಿತು.
ಬಿಜೆಪಿ ಮಟ್ಟಿಗೆ ಈ ಹಿಂದಿನ 6- 7 ಲೋಕಸಭೆ ಚುನಾವಣೆಗಳಂತೆ ಅಲ್ಲ ಈ ಬಾರಿಯ ಚುನಾವಣೆ. ಇದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕಾಂಗ್ರೆಸ್ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಇಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಕಣಕ್ಕಿಳಿಸಿದ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರ ವೈಯಕ್ತಿಕ ಚರಿಷ್ಮಾವೇ
ಕಾಂಗ್ರೆಸ್ ಗೆ ವರವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಿಲ್ಲವ ಸಮುದಾಯದ, ಇದುವರೆಗೆ ಯಾವುದೇ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ತನ್ನ ವಕೀಲ ವೃತ್ತಿ ಜತೆಗೆ ಸಮಾಜ ಸೇವೆ ಹಾಗೂ ಧಾರ್ಮಿಕ ಸೇವೆಯನ್ನು ನಡೆಸಿಕೊಂಡು ಬಂದವರು ಈ ಪದ್ಮರಾಜ್ ಎನ್ನುವುದು ಕಾಂಗ್ರೆಸ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ.
ಶುದ್ದ ಹಸ್ತದ, ಮೃದು ಸ್ವಭಾವದ
ಪದ್ಮರಾಜ್ ಅವರ ಮೇಲೆ ಇದುವರೆಗೂ ಯಾವುದೇ ಆರೋಪಗಳಿಲ್ಲ. ಇದನ್ನು ಅವರ ರಾಜಕೀಯ ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಕಾರ್ಯಕರ್ತರು ಕೂಡ ಈ ಬಾರಿ ಬದಲಾವಣೆ ಬೇಕು ಎಂದು ಪದ್ಮರಾಜ್ ಪರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದೇ ಪಕ್ಷದ ಸಂಸದರನ್ನು ಕಳೆದ 35 ವರ್ಷಗಳಿಂದ ಆರಿಸಿ ಕಳುಹಿಸಿದ್ದೇವೆ. ಹಿಂದಿನ‌ ಕಾಂಗ್ರೆಸ್ ಸಂಸದರು ತಂದ ಏರ್ ಫೋರ್ಟ್, ಬಂದರು, ಎಂಸಿಎಫ್, ಕೆಐಒಸಿಎಲ್, ಎನ್ ಐಟಿಕೆ ಬಿಟ್ಟರೆ, ನಾಲ್ಕು ಬಾರಿ ಸಂಸದರಾದ
ವಿ.ಧನಂಜಯ ಕುಮಾರ್, ಒಂದು ಬಾರಿ ಆಯ್ಕೆಯಾದ ಡಿ.ವಿ. ಸದಾನಂದ ಗೌಡ, ಮೂರು ಬಾರಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಯಾವ ಹೊಸ ಪ್ರಾಜೆಕ್ಟ್ ತಂದರು ? ಎಂದು ಉಪನ್ಯಾಸಕಿ ಸುನೀತಾ ಮಂಗಳೂರು ಅವರು ಖಾರವಾಗಿಯೇ ಪ್ರಶ್ನಿಸುತ್ತಾರೆ. ಮಕ್ಕಳಿಗೆ ರಾಜಕೀಯ ಶಾಸ್ತ್ರ ಬೋಧಿಸುವ ಸುನೀತಾ ಅವರು ಅಭಿವೃದ್ಧಿ ಅಂದ್ರೆ ಒಳ್ಳೆಯ ಡಾಮರು ರಸ್ತೆಯನ್ನು ಅಗೆದು ಕಾಂಕ್ರೀಟ್ ಹಾಕುವುದಲ್ಲ. ದುಡಿದು ಬದುಕುವ ಜನರ ಆದಾಯ ವೃದ್ದಿಯಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು, ಹೊಸ ಸರಕಾರಿ ಶಾಲೆಗಳು, ಆಸ್ಪತ್ರೆಗಳು ಬರಬೇಕು. ಕಳೆದ 35 ವರ್ಷದಲ್ಲಿ ಎಷ್ಟು ಮಂದಿಗೆ ಉದ್ಯೋಗ ಕೊಟ್ರು? ಎಂದು ಚಾಟಿ ಬೀಸುತ್ತಾರೆ.
ಕೇಂದ್ರ ಜತೆಗೆ ರಾಜ್ಯದಲ್ಲಿಯೂ ಈ ಹಿಂದೆ ಬಿಜೆಪಿ ಸರಕಾರವಿತ್ತು. ನಮ್ಮವರೇ ಆದ
ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು. ಮಂಗಳೂರಿಗೆ ಒಂದು ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಮಾಡಲು ಅವರಿಗೆ ಸಾಧ್ಯವಾಯಿತೇ? ಸುಳ್ಯದವರೇ ಆದ ಸದಾನಂದ ಗೌಡರಿಗೆ ಮಂಗಳೂರು ಜನರ ಕಷ್ಟ ಕಾಣಿಸೋಲ್ವೇ? ಕೇಂದ್ರದಲ್ಲಿ ಮೋದಿ ಅವರೇ ಮತ್ತೆ ಬರಲಿ, ತೊಂದರೆ ಇಲ್ಲ. ಇಲ್ಲಿ ಮಾತ್ರ ಬದಲಾವಣೆಯಾಗಬೇಕು
ಎಂದು ಉರ್ವದ ಹಿರಿಯ ನಾಗರಿಕರಾದ ರಾಮಪ್ರಸಾದ್ ಅವರು ರಿಪೋರ್ಟರ್ ಕರ್ನಾಟಕ ಮುಂದೆ ಅಭಿಪ್ರಾಯ ಮಂಡಿಸಿದರು.
ನಾನು ಮೋದಿ ಅಭಿಮಾನಿ. ಕೇಂದ್ರದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಆದರೆ ಇಲ್ಲಿ ಮಾತ್ರ ಪದ್ಮಣ್ಣ(ಪದ್ಮರಾಜ್ ಆರ್.) ಗೆಲ್ಲಬೇಕು. ಸ್ವಲ್ಪ ಬದಲಾವಣೆಯಾಗಬೇಕು ಎಂದು ಪುತ್ತೂರಿನ ಡ್ರೈವರ್ ನಾಗೇಶ್ ನುಡಿಯುತ್ತಾರೆ.
ಹಿಂದೂ, ಹಿಂದುತ್ವ ಹೇಳಿದ ಮಾತ್ರಕ್ಕೆ ಜನರ ಸಮಸ್ಯೆ ಪರಿಹಾರವಾಗುತ್ತಾ? ನಮಗೆ ಬೇಕಾಗಿರುವುದು ಸೌಹಾರ್ದತೆಯನ್ನು ಬೋಧಿಸುವ, ಸಹಬಾಳ್ವೆಯನ್ನು ಕಲ್ಪಿಸುವ ವಿವೇಕಾನಂದರು ಬೋಧಿಸಿದ ಹಿಂದುತ್ವ. ಆ ಗುಣಗಳಿರುವ ಅಭ್ಯರ್ಥಿ ಮುಂದಿನ ಸಂಸದರಾಗಬೇಕು ಎಂದು ಟೀನ್ ಎಜ್ ಓಟರ್ ಬಜಪೆಯ ವಿದ್ಯಾರ್ಥಿ ನವೀನ್ ಹೇಳುತ್ತಾರೆ. ಇದೆಲ್ಲವನ್ನು ಅವಲೋಕಿಸುವಾಗ ಜನರು ಚೇಂಜ್ ಕೇಳುತ್ತಿದ್ದಾರೆ ಎನ್ನುವುದು ತಕ್ಕಮಟ್ಟಿಗೆ ಸ್ಪಷ್ಟವಾಗುತ್ತದೆ. ಹಾಗಾದರೆ ಜನರು ಚೇಂಜ್ ಬಯಸಿದ್ದು ನಿಜವೇ ಎನ್ನುವುದನ್ನು ಕಾದು ನೋಡೋಣ.

ಇತ್ತೀಚಿನ ಸುದ್ದಿ

ಜಾಹೀರಾತು