7:10 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಬಿಜೆಪಿ ದೀನ ದಲಿತರ ಪಕ್ಷ: ಮಾಜಿ ಶಾಸಕ ಕುಮಾರಸ್ವಾಮಿ ಹೇಳಿಕೆಗೆ ವಿನಯ್ ಹಳೆಕೋಟೆ ತಿರುಗೇಟು

11/04/2024, 18:05

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್ ಬದುಕಿದ್ದಾಗ ಅವರನ್ನು ಕಾಂಗ್ರೆಸ್ ಅವಮಾನಿಸಿದ್ದು. ಜನಸಂಘ, ಬಿಜೆಪಿ ಅವರ ತತ್ವ ಸಿದ್ಧಾಂತ ಮತ್ತು ಪಾಂಡಿತ್ಯವನ್ನು ವಿಶ್ವಕ್ಕೆ ಸಾರಿವೆ. ಬಿಜೆಪಿ ಪಕ್ಷವು ವಿಕಸಿತ ಭಾರತದಲ್ಲಿ ದಲಿತರ ಎಳಿಗೆ ಹಾಗೂ ನಾಯಕತ್ವಕ್ಕಾಗಿ ಶ್ರಮಿಸುತ್ತಿದೆ. ರಾಷ್ಟ್ರಪತಿ ಸೇರಿದಂತೆ ಅನೇಕ ಸ್ಥಾನಮಾನಗಳನ್ನು ದಲಿತರಿಗೆ ನೀಡಿದ್ದು, ಮಾಜಿ ಶಾಸಕ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ಪಕ್ಷದ ವಕ್ತಾರ ವಿನಯ್ ಹಳೆಕೋಟೆ ಹೇಳಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇತ್ತೀಚೆಗೆ ಕಳಸದಲ್ಲಿ ದಲಿತರು ಬಿಜೆಪಿ ಕಚೇರಿಯನ್ನು ತುಳಿಯುವಂತೆ ನಾನೇ ಮಾಡಿದ್ದು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದ್ದು. ನೀವುಗಳು ಈ ಹಿಂದೆ ಪಕ್ಷಕ್ಕೆ ಬರುವ ಮುಂಚೆ ನಮ್ಮಲ್ಲಿ ಸಾವಿರಾರು ದಲಿತ ನಾಯಕರು ನಿಮಗಿಂತಲು ಹೆಚ್ಚು ಬುದ್ದಿವಂತರಿದ್ದರು. ಪಕ್ಷವನ್ನು ಸಂಘಟಿಸಿದ್ದರು. ಗೆದ್ದಲು ಹುಳುವಿನ ರೀತಿ ನೀವು ಬಿಜೆಪಿ ಪಕ್ಷಕ್ಕೆ ಆಗಮಿಸಿದ್ದು ಏನು ಇಲ್ಲದ ನಿಮ್ಮನ್ನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಐದು ಬಾರಿ ವಿಧಾನಸಭೆ ಟಿಕೆಟ್ ನೀಡಿ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದು ಬಿಜೆಪಿ ಪಕ್ಷವಾಗಿದೆ. ನಿಮ್ಮ ವೈಯಕ್ತಿಕ ದಂಧೆಗಳು ಮತ್ತು ಭ್ರಷ್ಟಾಚಾರದಿಂದ ಈ ಬಾರಿ ಟಿಕೆಟ್ ಅನ್ನು ನಿರಾಕರಿಸಿದ್ದು, ಇತ್ತೀಚಿಗೆ ನೀವು ಭ್ರಷ್ಟ ರಾಜಕೀಯ ಪಕ್ಷವೊಂದನ್ನು ಸೇರುವಾಗ ಈ ಹಿಂದೆಯೇ ನನ್ನದು ಕಾಂಗ್ರೆಸ್‌ ಮನಸ್ಥಿತಿ ಎಂದಿದ್ದೀರಿ. ದೇಶ ಒಡೆದ ಕೋಮುವಾದಿಗಳು ಭ್ರಷ್ಟಾಚಾರಿಗಳು ಆ ಪಕ್ಷದಲ್ಲೇ ಇರುವುದು ಸೂಕ್ತ. ನೀವೀಗ ರಾಜಕೀಯ ರಂಗಕ್ಕೆ ತಿರಸ್ಕೃತರಾಗಿದ್ದು. ಬೇರೆ ಪಕ್ಷದಲ್ಲಿ ಒಂದು ಬಾರಿ ಶಾಸಕನಾಗುವ ಶಕ್ತಿಯು ನಿಮ್ಮಲ್ಲಿಲ್ಲ. ನಿಮ್ಮ ಹಳಸಲು ಹೇಳಿಕೆಗಳು ಎಲ್ಲಿಯೂ ಈಗ ಸಲ್ಲುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಒಂದು ಬಾರಿ ಮೋಸ ಮಾಡಬಹುದು. ಎರಡನೇ ಬಾರಿ ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣಾ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ತಾಲೂಕಿನಲ್ಲಿ ಶತಸಿದ್ಧ ಎಂದು ವಿನಯ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು