8:06 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ನಾನೊಬ್ಬ ಹಿಂದೂ ಎನ್ನಲು ಹೆಮ್ಮೆ ಇದೆ, ನಾನು ಕಲಿತ ಹಿಂದುತ್ವ ಇನ್ನೊಂದು ಜಾತಿ- ಧರ್ಮವನ್ನು ಪ್ರೀತಿಸಿ, ಗೌರವಿಸುವುದು ಆಗಿದೆ: ಪದ್ಮರಾಜ್ ಆರ್.

01/04/2024, 20:23

ಮಂಗಳೂರು(reporterkarnataka.com): ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವ. ನಾನೊಬ್ಬ ಹಿಂದೂ ಎನ್ನಲು ಹೆಮ್ಮೆ ಇದೆ. ಹಿಂದೂ ಧರ್ಮದ ಆಚರಣೆಯನ್ನು ಮಾಡುತ್ತೇನೆ. ನಾನು ಕಲಿತ ಹಿಂದುತ್ವ ಎಂದರೇ ಇನ್ನೊಂದು ಜಾತಿ- ಧರ್ಮವನ್ನು ಪ್ರೀತಿಸಿ ಗೌರವಿಸುವುದು ಆಗಿದೆ ಎಂದು ದ.ಕ. ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನಾನು ಹಿಂದುವಾದಿಯಾಗಿ ದೇವರ ಕಾರ್ಯವನ್ನು ನಡೆಸುತ್ತಿದ್ದೇನೆ ಎಂದು ನುಡಿದರು.
ನಮ್ಮ ಭಾರತವನ್ನು ಇತರೇ ದೇಶಗಳು ಗೌರವದಿಂದ ಪ್ರೀತಿಯಿಂದ ಕಾಣುತ್ತದೆ. ಯಾಕೆಂದರೆ ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ರಾಷ್ಟ್ರ. ಸುಸಂಸ್ಕೃತ ದೇಶ, ಇಲ್ಲಿ ವಿವಿಧ ಜಾತಿ- ಧರ್ಮಗಳಿದ್ದರೂ, ಜಾತಿಗೆ ಸೀಮಿತವಾಗಿ ನಾವಿಲ್ಲ. ನಾವೆಲ್ಲರೂ ದೇವರ ಮಕ್ಕಳು ಎಂದು ಅವರು ಅವರು ನುಡಿದರು.
ಪದ್ಮರಾಜ್ ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು