ಇತ್ತೀಚಿನ ಸುದ್ದಿ
ತೊಗರಿ ಬೆಳೆ ರೈತರು ಮುಗಿಲು ನೋಡುತ್ತಿದ್ದಾರೆ: ಮಳೆಯ ನಿರೀಕ್ಷೆಯಲ್ಲಿ ರಾಯಚೂರಿನ ಅನ್ನದಾತರು
14/08/2021, 09:41
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka@gmail.com
ರಾಯಚೂರು ಜಿಲ್ಲೆಯಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ತೊಗರಿ ಹಾಗೂ ಇನ್ನಿತರ ಬೆಳೆಗಳು ಬೆಳೆಸಿದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ರೈತರು ಮುಗಿಲ ನೋಡುವ ಪರಿಸ್ಥಿತಿ ಎದುರಾಗಿದೆ.
ರೈತರು ಉತ್ತು, ಬಿತ್ತಿ ಬೆಳೆಸಿದ ಫಲಸು ಕೈಗೆ ಸಿಗಬೇಕಾದರೆ ವರುಣ ಕೃಪೆ ತೋರಿಸಲೇ ಬೇಕು. ಬೆಳೆ ಚೆನ್ನಾಗಿರಬೇಕಾದರೆ ಬೆಳಗಾಗಿ ಬಸವಣ್ಣ ಅಂದರೆ ಎತ್ತುಗಳು ಚೆನ್ನಾಗಿರಬೇಕು. ಅಂದರೆ ಬೆಳೆ ಚೆನ್ನಾಗಿ ಬರಬೇಕು ಅದಕ್ಕಾಗಿ ಗ್ರಾಮೀಣ ಪ್ರದೇಶದ ಜನರು ದೇವರ ಸ್ಮರಣೆ, ಪೂಜೆ, ಸೇವೆ ಸಲ್ಲಿಸಿದ್ದಾರೆ .
ಒಟ್ಟಿನಲ್ಲಿ ಮಳೆಗಾಗಿ ರೈತರು ಮೊರೆ ಹೋಗಿದ್ದು ನಿಜ. ಹೀಗೆ 2 ಅಥವಾ 3 ವಾರಗಳು ಮಳೆ ಬರದೇ ಇದ್ದರೆ ಬೆಳೆಗಳು ನಾಶವಾಗುತ್ತವೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.