ಇತ್ತೀಚಿನ ಸುದ್ದಿ
ಯೇಸು ಕ್ರಿಸ್ತರ ಪುನರುತ್ಥಾನ ಮಾನವ ಜಗತ್ತಿಗೆ ಹೊಸ ಭರವಸೆ ನೀಡಿದೆ: ಫಾಸ್ಕಾ ಜಾಗರಣೆಯ ವಿಶೇಷ ಬಲಿಪೂಜೆಯಲ್ಲಿ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ
30/03/2024, 22:07

ಮಂಗಳೂರು(reporterkarnataka.com): ಇಂದಿನ ಸಮಾಜದಲ್ಲಿ ತಮ್ಮ ಮೇಲಿನ ಗೌರವ, ಬದುಕಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದು, ಆದರ್ಶಯುತ ಜೀವನಕ್ಕೆ ಯೇಸು ಕ್ರಿಸ್ತರು ಸಾಕ್ಷಿಯಾಗಿದ್ದಾರೆ. ಯೇಸುವಿನ ಪುನರುತ್ಥಾನ ಮರಣದ ಬಳಿಕ ಕ್ರೈಸ್ತರಿಗೆ ಸ್ವರ್ಗಕ್ಕೆ ತೆರಳುವಂತಹ ಹೊಸ ದಿಸೆ ಆರಂಭವಾದಂತೆ ಎಂದು ಮಂಗಳೂರು ಬಿಷಪ್ ಅತೀ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ನಗರದ ರೊಸಾರಿಯೋ ಕೆಥೆಡ್ರಲ್ ನಲ್ಲಿ ಶನಿವಾರ ಅವರು ಫಾಸ್ಕಾ ಜಾಗರಣೆಯ ವಿಶೇಷ ಬಲಿಪೂಜೆಯಲ್ಲಿ ಪ್ರವಚನ ನೀಡಿ ಮಾತನಾಡಿದರು.
ನಿರಂತರ ಪ್ರಾರ್ಥನೆಯನ್ನು ಸಲ್ಲಿಸುವುದ್ದರಿಂದ ಜೀವನಕ್ಕೆ ಹೊಸ ಅರ್ಥ ಸಿಗಲಿದೆ. ಯೇಸುವಿನ ಪುನರುತ್ಥಾನದ ಮೂಲಕ ಮಾನವ ಜಗತ್ತಿನಲ್ಲಿ ಹೊಸ ಭರವಸೆಯೊಂದು ಮೂಡುತ್ತದೆ. ಕ್ರೈಸ್ತರು ಸಾವಿನ ನಂತರ ಕೂಡ ಬದುಕಿದೆ ಎನ್ನುವ ವಿಚಾರವನ್ನು ಯೇಸುವಿನ ಪುನರುತ್ಥಾನದ ಮೂಲಕ ವಿಶ್ವಾಸವನ್ನು ಇಟ್ಟುಕೊಳ್ಳುತ್ತಾರೆ ಎಂದರು.
ಬಲಿಪೂಜೆಯ ಮೊದಲು ಫಾಸ್ಕಾ ಜಾಗರಣೆಯ (ಈಸ್ಟರ್ ಈವ್) ಮೊಂಬತ್ತಿಯನ್ನು ಬೆಳಗಿಸುವ ಮೂಲಕ ಯೇಸುವಿನ ಪುನರುತ್ಥಾನದ ಜಾಗರಣೆಯನ್ನು ಮಾಡುವ ಜತೆಯಲ್ಲಿ ಹಳೆಯ ಒಡಂಬಡಿಕೆಯ ಐದು ಹಾಗೂ ಹೊಸ ಒಡಂಬಡಿಕೆಯ ಎರಡು ಅಧ್ಯಾಯಗಳನ್ನು ಓದುವ ಜತೆಯಲ್ಲಿ ಕೀರ್ತನೆಯ ಮೂಲಕ ಪ್ರಾರ್ಥನೆಯ ವಿಧಿ ಸಾಗಿತು. ವಿಶೇಷವಾಗಿ ಹಿಂದಿನ ಫಾಸ್ಕಾದ ರೀತಿ- ರಿವಾಜು ಇದರ ಆಚರಣೆಯ ಕುರಿತು ವಿವರಗಳನ್ನು ಪ್ರಾರ್ಥನೆ, ಕೀರ್ತನೆಯ ಮೂಲಕ ನೀಡಲಾಯಿತು. ಪವಿತ್ರ ಸಂಸ್ಕಾರಕ್ಕೆ ಬಳಸುವ ಪವಿತ್ರ ಜಲದದ ಮೇಲೆ ಆರ್ಶೀವಾದ ನಡೆಯಿತು. ಈ ಬಳಿಕ ಬಲಿಪೂಜೆಯ ವಿಧಿಗಳು ಸಾಗಿತು. ಕರಾವಳಿಯ ನಾನಾ ಚರ್ಚ್‌ಗಳಲ್ಲಿ ಶನಿವಾರ ಸಂಜೆಯ ಹೊತ್ತಿನಲ್ಲಿ ಫಾಸ್ಕಾ ಜಾಗರಣೆಯ ‘ಧಾರ್ಮಿಕ ವಿವಿವಿಧಾನಗಳು ಸಾಗಿತು. ಮಂಗಳೂರಿನ ಮಿಲಾಗ್ರಿಸ್, ಉರ್ವ, ಅಶೋಕನಗರ, ಕೂಳೂರು, ಬಿಜೈ, ವಾಮಂಜೂರು, ಶಕ್ತಿನಗರದ ಪ್ರಮುಖ ಚರ್ಚ್‌ಗಳಲ್ಲಿ ಫಾಸ್ಕಾ ಜಾಗರಣೆಯ ಬಲಿಪೂಜೆಗಳು ಸಾಗಿತು. ಮಾ.31ರಂದು ಕ್ರೈಸ್ತರು ಯೇಸುವಿನ ಪುನರುತ್ಥಾನವಾಗಿರುವ ನೆನಪಿನ ಈಸ್ಟರ್ ಹಬ್ಬವನ್ನು ಕ್ರೈಸ್ತರು ಆಚರಣೆ ಮಾಡುತ್ತಾರೆ. ಈಸ್ಟರ್ ಹಬ್ಬದ ಆಚರಣೆಯ ಮೂಲಕ ನಲವತ್ತು ದಿನಗಳ ತಪಸ್ಸು ಕಾಲ ಅಂತ್ಯವಾಗುತ್ತದೆ.
*ಈಸ್ಟರ್ ಹಬ್ಬದ ಬಲಿಪೂಜೆ:* ಮಂಗಳೂರು ಕ್ರೈಸ್ತ ‘ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ಈಸ್ಟರ್ ಹಬ್ಬ ಸೇರಿದಂತೆ ಕ್ರೈಸ್ತರು ಆಚರಣೆಯ ಮಾಡುವ ಕ್ರಿಸ್ಮಸ್, ಮೊಂತಿಹಬ್ಬದ ಬಲಿಪೂಜೆಗಳನ್ನು ‘ಧರ್ಮಪ್ರಾಂತ್ಯದ ಗ್ರಾಮಾಂತರ ‘ಭಾಗದ ಸಣ್ಣ ಚರ್ಚ್‌ಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಆಚರಣೆ ಮಾಡುವ ಪರಿಪಾಟವನ್ನು ಬೆಳೆಸಿಕೊಂಡಿದ್ದಾರೆ. ಈ ಬಾರಿ ನಿಡ್ಡೋಡಿಯ ಲಿಟ್ಲ್ ಫ್ಲವರ್ ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.