12:50 PM Saturday28 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಹೊಡೆಯಲು ಸಹಕಾರ: 4 ಮಂದಿ ಶಿಕ್ಷಕರ ಅಮಾನತು

30/03/2024, 21:09

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

2023-24ನೇ ಸಾಲಿನ ಎಸ್​​ಎಸ್​​ಎಲ್​ಸಿ ವಾರ್ಷಿಕ ಪರೀಕ್ಷೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಿ ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇವಣ್ಣ, ಗೋಸಿಕೆರೆಯ ರಾಧಾಕೃಷ್ಣ ಗ್ರಾಮಾಂತರ ಪ್ರೌಢಶಾಲೆಯ ಸಹ ಶಿಕ್ಷಕ ರಾಘವೇಂದ್ರ, ಪಿ.ಓಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಶೇಖರ ಹಾಗೂ ಕೊರ್ಲಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಕಾಶ್ ಅವರು ಅಮಾನತುಗೊಂಡಿದ್ದಾರೆ. ಶನಿವಾರ ಪರುಶುರಾಮಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದು, ಇವರೆಲ್ಲರೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದರು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ವಿಧ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸುತ್ತಿರುವುದು ಕಂಡು ಬಂದಿದೆ. ನಕಲು ಮಾಡುವುದನ್ನು ತಡೆಯದೇ ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೆ, ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಹ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು