6:39 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ವೆನ್ ಲಾಕ್ ಆಸ್ಪತ್ರೆಗೆ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಒದಗಿಸಿದ ಮಂಗಳೂರಿನ ಸೇವ್ ಲೈಫ್  ಟ್ರಸ್ಟ್ ಗೆ ಪ್ರಶಂಸನಾ ಪತ್ರ

19/05/2021, 10:53

ಮಂಗಳೂರು(reporterkarnataka news) :  ಕೊರೊನಾ ಎರಡನೇ ಅಲೆಯ ಕಷ್ಟಕಾಲದಲ್ಲಿ

ಜಿಲ್ಲಾ ವೆನಲಾಕ್ ಆಸ್ಪತ್ರೆಗೆ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಳನ್ನು ಒದಗಿಸಿದ ನಗರದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಗೆ ವೆನ್ ಲಾಕ್ ಆಸ್ಪತ್ರೆ ವತಿಯಿಂದ ಪ್ರಶಂಸನಾ ಪತ್ರ ನೀಡಲಾಗಿದೆ.

ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ ಕಾರ್ ಅವರ ಹೆಸರಿಗೆ ವೆನ್ ಲಾಕ್ ಆಸ್ಪತ್ರೆಯ ಅಧ್ಯಕ್ಷರು ಪ್ರಶಂಸನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯಲ್ಲಿ  ಆರ್ಥಿಕವಾಗಿ ಹಿಂದುಳಿದ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಹಣ ಸಂಗ್ರಹಿಸಿ ವೈದ್ಯಕೀಯ ವೆಚ್ಚ ಭರಿಸುತಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.  ಕಳೆದ 10 ತಿಂಗಳಿನಲ್ಲಿ 200 ಕ್ಕೂ ಅಧಿಕ ಬೇರೆ ಬೇರೆ ಕಾರಣಗಳಿಗೆ 1.1 ಕೋಟಿಗೂ ಅಧಿಕ ಮೊತ್ತ ಸಹಾಯ ಹಸ್ತ ಚಾಚಿದ್ದು , ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಈ ಬಾರಿ  ಮಂಗಳೂರು , ಬಂಟ್ವಾಳ , ಉಡುಪಿಯ 700 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗಿದೆ ,   ಮಹಾಮಾರಿಯ ಎರಡನೇ ಅಲೆಯು ವಿಪರೀತವಾಗಿ ಹರಡುತ್ತಿದ್ದು , ರಾಜ್ಯಾ ದ್ಯಂತ ಕೈ ಮೀರಿಹೋಗಿರುತ್ತದೆ , ಈ ಪರಿಸ್ಥಿತಿಯನ್ನು ಮನಗಂಡು  ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಓಕ್ಸಿಜೆನ್  ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ನೀಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು