ಇತ್ತೀಚಿನ ಸುದ್ದಿ
ದಿ ಥಿಯೇಟರ್ ಆಫ್ ಡ್ರೀಮ್ಸ್: 5 ಮಂದಿಯ ತಂಡದ ಫುಟ್‍ಬಾಲ್ ಟೂರ್ನಿ ಗೆಲ್ಲಿ ಮತ್ತು ಓಲ್ಡ್ ಟ್ರಾಫೋರ್ಡ್‍ನಲ್ಲಿ ಆಟವಾಡಿ
16/03/2024, 19:20
ಬೆಂಗಳೂರು(reporterkarnataka.com); ಪ್ರಮುಖ ಟೈರ್ ತಯಾರಕ ಕಂಪನಿಯಾದ ಅಪೊಲೊ ಟೈರ್ಸ್ ಇಂದು ರೋಡ್ ಟು ಓಲ್ಡ್ ಟ್ರಾಫರ್ಡ್‍ನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಇದು ಮ್ಯಾಂಚೆಸ್ಟರ್ ಯುನೈಟೆಡ್ ಬೆಂಬಲಿಸುವ ಒಂದು ತಂಡದಲ್ಲಿ ಐದು ಮಂದಿ ಇರುವ ಫುಟ್‍ಬಾಲ್ ಪಂದ್ಯಾವಳಿಯಾಗಿದ್ದು, ಭಾರತದಾದ್ಯಂತ ನಡೆಯಲಿದೆ. ಮಾರ್ಚ್ 23 ರಂದು ಬೆಂಗಳೂರಿನ ಆವೃತ್ತಿ ಕೋರಮಂಗಲದ ಟರ್ಫ್ ಪಾರ್ಕ್‍ನಲ್ಲಿ ನಡೆಯಲಿದೆ.
ತಮ್ಮ ಅತ್ಯುತ್ತಮ ಸಾಮಥ್ರ್ಯವನ್ನು ಇಲ್ಲಿ ಪ್ರದರ್ಶಿಸುವ ಪ್ರತಿಭಾವಂತ ಫುಟ್‍ಬಾಲ್ ಆಟಗಾರರು ಯುಕೆ ಮ್ಯಾಂಚೆಸ್ಟರ್‍ಗೆ ಪ್ರಯಾಣಿಸಲು ಮತ್ತು ದಂತಕಥೆ ಎನಿಸಿದ ಓಲ್ಡ್ ಟ್ರಾಫರ್ಡ್‍ನಲ್ಲಿ ಆಡಲು ಮ್ಯಾಂಚೆಸ್ಟರ್‍ಗೆ ಪ್ರಯಾಣಿಸಲು ಸರಿಸಾಟಿಯಿಲ್ಲದ ಮತ್ತು ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವನ್ನು ಗಳಿಸುತ್ತಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಕ್ರೀಡಾಂಗಣ ಎಫ್‍ಸಿಯ ತವರು. ಜಾಗತಿಕ ವಿಜೇತರನ್ನು ಆಯ್ಕೆ ಮಾಡಲು ಅಪೊಲೊ ಟೈರ್ಸ್‍ನ ‘ರೋಡ್ ಟು ಓಲ್ಡ್ ಟ್ರಾಫರ್ಡ್’ ನ ಗ್ರಾಂಡ್ ಫಿನಾಲೆಯು ಮೇ 31, 2024 ರಂದು ಐಕಾನಿಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯಾವಳಿಯು ದೊಡ್ಡ ಸ್ವರೂಪದಲ್ಲಿ ಹಿಂತಿರುಗುತ್ತಿದೆ ಮತ್ತು ದೆಹಲಿ, ಪುಣೆ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಕೊಚ್ಚಿ ಆರು ನಗರಗಳಲ್ಲಿ ಪ್ರಾರಂಭಗೊಳ್ಳಲಿದೆ, ಇದರಲ್ಲಿ ಬೆಂಗಳೂರು ಆವೃತ್ತಿಯ ವಿಜೇತರು ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್‍ನಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಅಪೊಲೊ ಟೈರ್ಸ್ ಲಿಮಿಟೆಡ್‍ನ ಏಷ್ಯಾ ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಎಪಿಎಂಇಎ), ಮಾರ್ಕೆಟಿಂಗ್ ಗ್ರೂಪ್ ಹೆಡ್ ವಿಕ್ರಮ್ ಗರ್ಗಾ ಈ ಬಗ್ಗೆ ಮಾತನಾಡಿ, “ಓಲ್ಡ್ ಟ್ರಾಫರ್ಡ್‍ನಲ್ಲಿ ಆಡುವುದು ಒಂದು ಮಹತ್ವದ ಮೈಲಿಗಲ್ಲು ಮತ್ತು ಕ್ರೀಡಾಂಗಣದ ಶ್ರೀಮಂತ ಇತಿಹಾಸ, ಉತ್ಸಾಹಭರಿತ ಅಭಿಮಾನಿ ಬಳಗದ ಕಾರಣದಿಂದ ಮತ್ತು ಜಾಗತಿಕವಾಗಿ ಅತ್ಯಂತ ಯಶಸ್ವಿ ಫುಟ್‍ಬಾಲ್ ಕ್ಲಬ್‍ಗಳಲ್ಲಿ ಒಂದಾದ ಮ್ಯಾಂಚೆಸ್ಟರ್ ಯುನೈಟೆಡ್‍ಗೆ ಸಂಬಂಧಿಸಿದ ಭವ್ಯತೆ ಕಾರಣದಿಂದ ಇದು ಪ್ರತಿಷ್ಠಿತ ಅವಕಾಶವಾಗಿದೆ. ‘ರೋಡ್ ಟು ಓಲ್ಡ್ ಟ್ರಾಫರ್ಡ್’ ಉಪಕ್ರಮದೊಂದಿಗೆ, ನಾವು ಭಾರತದಲ್ಲಿ ಫುಟ್‍ಬಾಲ್‍ನ ಉತ್ಸಾಹವನ್ನು ಆಚರಿಸಲು ಮತ್ತು ಪ್ರತಿಭಾವಂತ ಫುಟ್‍ಬಾಲ್ ಆಟಗಾರರಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ವೇದಿಕೆ ನೀಡುವ ಗುರಿಯನ್ನು ಹೊಂದಿದ್ದೇವೆ. ಈ ಸಣ್ಣ ಹೆಜ್ಜೆಯು ಯುವ ಭಾರತೀಯ ಫುಟ್ಬಾಲ್ ಆಟಗಾರರನ್ನು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರೇರೇಪಿಸುವ ಮತ್ತು ಸ್ಫೂರ್ತಿ ತುಂಬವಲ್ಲಿ ಬಹಳ ದೂರ ಸಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.
ಕಳೆದ ಆವೃತ್ತಿಯನ್ನು ಮುಂಬೈನ ಕಲಿನಾ ರೇಂಜರ್ಸ್ ಗೆದ್ದಿದ್ದರು. ಅವರು ತಮ್ಮ ಅಸಾಧಾರಣ ಫುಟ್‍ಬಾಲ್ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಪಂದ್ಯಾವಳಿಯ ಭಾರತ ಆವೃತ್ತಿಯಲ್ಲೂ ವಿಜೇತರಾಗಿದ್ದರು. ಅವರ ವಿರುದ್ಧ ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ಡಿಮಿಟರ್ ಬರ್ಬಟೋವ್, ತ್ರಿವಳಿ ವಿಜೇತರಾದ ವೆಸ್ ಬ್ರೌನ್ ಮತ್ತು ಆಂಡಿ ಕೋಲ್ ಅವರನ್ನು ಒಳಗೊಂಡಿರುವ ಲೆಜೆಂಡ್ಸ್ ತಂಡವು ಭಾರತೀಯ ಫುಟ್ಬಾಲ್ ಹೀರೋಗಳಾದ ರೆನೆಡಿ ಸಿಂಗ್, ಜೆಜೆ ಲಾಲ್ಪೆಖ್ಲುವಾ, ರಾಬಿನ್ ಸಿಂಗ್ ಮತ್ತು ತಾನ್ವಿ ಹ್ಯಾನ್ಸ್ ಅವರನ್ನು ಒಳಗೊಂಡಿತ್ತು.
ಅಪೊಲೊ ಟೈರ್ಸ್ ರೋಡ್ ಟು ಓಲ್ಡ್ ಟ್ರಾಫರ್ಡ್ ಪಂದ್ಯಾವಳಿಯ ಗ್ರ್ಯಾಂಡ್ ಫಿನಾಲೆಯನ್ನು ಗೆದ್ದಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ಮ್ಯಾಂಚೆಸ್ಟರ್ ಯುನೈಟೆಡ್ ಲೆಜೆಂಡ್ಸ್ ಮತ್ತು ಮಾಜಿ ಭಾರತೀಯ ಆಟಗಾರರ ವಿರುದ್ಧ ಸ್ಪರ್ಧಿಸಲು ಇದು ನಂಬಲಾಗದ ಅನುಭವವಾಗಿದೆ ಮತ್ತು ದಂತಕಥೆ ಎನಿಸಿದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆಡಲು ಈ ಅವಕಾಶವನ್ನು ಪಡೆಯುವುದು ನಮಗೆ ದೊಡ್ಡ ಗೌರವವಾಗಿದೆ. ನಮ್ಮನ್ನು ನಾವು ಸಾಬೀತುಪಡಿಸಲು ಮತ್ತು ನಮ್ಮ ಕನಸುಗಳನ್ನು ಈಡೇರಿಸಲು ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ನಾವು ಅಪೊಲೊ ಟೈರ್ಸ್‍ಗೆ ಧನ್ಯವಾದ ಹೇಳುತ್ತೇವೆ” ಎಂದು ಕಲಿನಾ ರೇಂಜರ್ಸ್ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರ ಪೃಥ್ವಿ ವಿಕ್ಟರ್ ಅವರು 2023 ರ ಆವೃತ್ತಿಯನ್ನು ಗೆದ್ದಾಗ ನುಡಿದಿದರು.
ಪಂದ್ಯಾವಳಿಯ ನೋಂದಣಿಗಳು ಈಗ ಮುಕ್ತವಾಗಿವೆ ಮತ್ತು ಆಸಕ್ತ ತಂಡಗಳು ಇಲ್ಲಿ ನೋಂದಾಯಿಸಿಕೊಳ್ಳಬಹುದು https://www.apollotyres.com/en-in/stories/campaigns/sports/road-to-old-trafford/rtot-consumer-contest/