12:58 AM Wednesday1 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಶಿರೂರು ಮಠಕ್ಕೆ ನೂತನ ಯತಿಗಳ ನೇಮಕ : ವಿಶ್ವ ಹಿಂದೂ ಪರಿಷತ್ ಸ್ವಾಗತ

19/05/2021, 10:56

ಮಂಗಳೂರು(reporterkarnataka news) :ಇತ್ತೀಚೆಗೆ ಉಡುಪಿ ಶಿರೂರು ಮಠಕ್ಕೆ ಉತ್ತರಾಕಾರಿಯಾಗಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರನ್ನು ನಿಯುಕ್ತಿಗೊಳಿಸಿರುವುದು ಸಮಾಜಕ್ಕೆ ಸಂತಸ ತಂದಿದ್ದು, ಉಡುಪಿ ಅಷ್ಟಮಠಗಳು ಉತ್ತರಾಕಾರಿಗಳ ಆಯ್ಕೆಯಲ್ಲಿ ಯೋಗ್ಯ ಮಾನದಂಡಗಳನ್ನು ರೂಪಿಸುವ ಮೂಲಕ ಮಾದರಿಯಾಗಿರುವುದು ಕೂಡಾ ಸ್ವಾಗತಾರ್ಹ ಎಂಬುದಾಗಿ ವಿಶ್ವಹಿಂದು ಪರಿಷತ್ತು ಅಭಿನಂದಿಸಿದೆ.

ಶಿರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ವಾದಿರಾಜ ಮಠದ ಸ್ವಾಮಿಗಳಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಧಾರ್ಮಿಕ ಹಿನ್ನೆಲೆಯ ಅನಿರುದ್ಧ ಸರಳತ್ತಾಯರನ್ನು ಆಯ್ಕೆ ಮಾಡಿ ಯೋಗ್ಯ ರೀತಿಯಲ್ಲಿ ಶಾಸ್ತ್ರೋಕ್ತ  ಸನ್ಯಾಸದೀಕ್ಷೆಯ ಮೂಲಕ 

ಶ್ರೀ ವೇದವರ್ಧನ ಎಂಬ ಅಭಿನಾಮ ನೀಡಿ ಶಿರೂರು ಮಠದ ಯತಿಗಳನ್ನಾಗಿ ನೇಮಿಸಿರುವುದು ಸರ್ವರ ಪ್ರಶಂಸೆಗೆ ಕಾರಣವಾಗಿದೆ ಎಂಬುದಾಗಿ ವಿಶ್ವಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ .

ಇತ್ತೀಚೆಗೆ ಅಷ್ಟಮಠಗಳಿಗೆ ಹೊಸ ಶಿಷ್ಯರನ್ನು ನಿಯುಕ್ತಿಗೊಳಿಸುವಾಗ ಯೋಗ್ಯ ಮಾನದಂಡಗಳನ್ನು ಅಳವಡಿಸಿ ಸತ್ಸಂಪ್ರದಾಯಕ್ಕೆ ಮುಂದಾಗಿರುವುದು ಹಿಂದು ಸಮಾಜಕ್ಕೆ ಹೆಮ್ಮೆ  ಮತ್ತು ಅಭಿಮಾನ ಮೂಡಿಸುವ ಸಂಗತಿಯಾಗಿದೆ.ಶ್ರೀಶಿರೂರು ಮಠದ ನವಯತಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರಿಗೆ ವಿಶ್ವಹಿಂದು ಪರಿಷತ್ತು ಶುಭಕೋರುತ್ತದೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಅವರಿಂದ ಹಿಂದು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಲಭಿಸುವಂತಾಗಲು ಶ್ರೀಕೃಷ್ಣನ ಅನುಗ್ರಹ ಇರಲೆಂದು ವಿಹಿಂಪ ಪ್ರಾರ್ಥಿಸುತ್ತದೆ ಎಂದು ಪ್ರೊ.ಪುರಾಣಿಕ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು