7:52 PM Friday4 - July 2025
ಬ್ರೇಕಿಂಗ್ ನ್ಯೂಸ್
Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ…

ಇತ್ತೀಚಿನ ಸುದ್ದಿ

ಇಸ್ರೇಲ್ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು; ಎಪ್ರಿಲ್ ಮೊದಲ ವಾರದಲ್ಲಿ ನೇಮಕಾತಿ ಸಂದರ್ಶನ

13/03/2024, 18:57

ಮಂಗಳೂರು(reporterkarnataka.com):
ಇಸ್ರೇಲ್ ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತೀಯ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2೦೦4ರಿಂದ ಇಸ್ರೇಲಿಗೆ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ‘ಫೆರ್ನಾಂಡಿಸ್ ಗ್ರೂಪ್’, ಇಸ್ರೇಲಿನ ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಭಾರತದಲ್ಲಿ ಅವರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಉದ್ಯೋಗಗಳು :
ಶಟರಿಂಗ್ ಕಾರ್ಪೆಂಟರ್ಸ್ -250 ಮಂದಿ
ಟೈಲ್ ಮೇಸನ್ಸ್(ಸೆರಾಮಿಕ್) 250 ಮಂದಿ
ಸ್ಟೀಲ್ ಫಿಕ್ಸ್ರ್ (ಐರನ್ ಮತ್ತು ಬಾರ್ ಬೆಂಡಿಂಗ್) – 250 ಮಂದಿ
ಪ್ಲಾಸ್ಟರ್ ಮೇಸನ್ಸ್ – 250 ಮಂದಿ
ಬ್ಲೊಕ್ ಮೇಸನ್ಸ್ – 250 ಮಂದಿ
ಹೆಲ್ಪರ್ಸ್ – 500 ಮಂದಿ
ಅಭ್ಯರ್ಥಿಗಳು 25 ರಿಂದ 45 ವರ್ಷದವರಾಗಿದ್ದು, ಕಟ್ಟಡ ನಿರ್ಮಾಣದಲ್ಲಿ 2 ರಿಂದ 3 ವರುಷ ಅನುಭವವಿರುವವರು ಇರಬೇಕು. ಅನುಭವ ಇಲ್ಲದವರು ಹೆಲ್ರ‍್ಸ್ ಆಗಿ ಕೆಲಸಮಾಡಲು ಅವಕಾಶವಿದೆ. ಅವರಿಗೆ ಮಂಗಳೂರಿನಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುವುದು. ವೇತನ ಶ್ರೇಣಿಯು 1,50,000 ರಿಂದ 2,00,000 (ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೆ), ವಸತಿ, ಮೆಡಿಕಲ್ ಮತ್ತು ಸಾರಿಗೆ ವ್ಯವಸ್ಥೆ ಕಂಪೆನಿಯು ನೀಡುತ್ತದೆ.
ಇಸ್ರೇಲ್ ಸಂದರ್ಶನ: ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ/ಅರ್ಜಿ, ಪಾಸ್‌ಪೋರ್ಟ್ ಕಾಪಿ, ಅನುಭವ ಸರ್ಟಿಫಿಕೇಟ್‌ನೊಂದಿಗೆ ಫೆರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, ೩ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲೆ, ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ, ವೆಲೆನ್ಸಿಯಾ, ಮಂಗಳೂರು ಇಲ್ಲಿ ಸಂಪರ್ಕಿಸಬಹುದು. ಫೆರ್ನಾಂಡಿಸ್ ಗ್ರೂಪ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈ, ನವದೆಹಲಿ ಅಥವಾ ಕೊಲ್ಕೊತ್ತಾದಲ್ಲಿ ಇಸ್ರೇಲ್ ಮಿನಿಸ್ಟ್ರಿ ಆಫ್ ಕನ್‌ಸ್ಟ್ರಕ್ಷನ್ ಇವರಿಂದ ನಡೆಯುವ ಸಂದರ್ಶನಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇಸ್ರೇಲಿಗೆ ಸಾವಿರಾರು ಕಟ್ಟಡ ಕಾರ್ಮಿಕರ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಗಮನದ ಮೇಲೆ ವೀಸಾ (ಗಿisಚಿ oಟಿ ಚಿಡಿಡಿivಚಿಟ) ನೀಡುವ ವ್ಯವಸ್ಥೆ ಇಸ್ರೇಲ್ ಸರಕಾರ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9686675464 / 9686528447 / 9731128608 / 9686675469 / 9686675465 / 8341738573 ಸಂಪರ್ಕಿಸಬಹುದು ಎಂದು ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು