1:06 AM Sunday12 - January 2025
ಬ್ರೇಕಿಂಗ್ ನ್ಯೂಸ್
ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ… ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ 5 ವರ್ಷಗಳಲ್ಲಿ 50,000 ಕೋಟಿ ಹೂಡಿಕೆ… ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ

ಇತ್ತೀಚಿನ ಸುದ್ದಿ

ಕೂಡ್ಲಿಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 550 ಕೋಟಿ ರೂ.ಅನುದಾನ: ಶಾಸಕ ಡಾ. ಎನ್.ಟಿ. ಶ್ರೀನಿವಾಸ್

08/03/2024, 20:01

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಎಲ್ಲಾ ಇಲಾಖೆಗಳನ್ನೊಳಗೊಂಡಂತೆ, ಕ್ಷೇತ್ರಕ್ಕೆ 550 ಕೋಟಿ ರೂ. ಅನುದಾನ ತಂದಿರುವುದಾಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.


ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಎಲ್ಲಾ ಇಲಾಖೆಗಳ ತಾಲೂಕು ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಇಲಾಖಾಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಕ್ಷೇತ್ರದ ರೈತರಿಗೆ ಬರ ಪರಿಹಾರದ ಅನುದಾನ ಮಂಜೂರಾಗಿರುವುದಾಗಿ ಸಭೆಗೆ ತಿಳಿಸಿದರು.
ಶಾಸಕರು ಅಧಿಕಾರಿಗಳನ್ನುದ್ಧೇಶಿಸಿ ಮಾತನಾಡಿ, ಕ್ಷೇತ್ರದಲ್ಲೆಡೆ ಕುಡಿಯುವ ನೀರಿನ ಸಮಸ್ಯೆ. ಹಾಗೂ ಧನ ಕರುಗಳಿಗೆ ಮೇವಿನ ಸಮಸ್ಯೆ ಇದ್ದಲ್ಲಿ, ಕೂಡಲೇ ನಮ್ಮ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಿಗಡಾಯಿಸದಂತೆ ಜಾಗ್ರತೆ ವಹಿಸಬೇಕೆಂದು ಸೂಚಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ, ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ಹಾಲಿ ಇರುವಂತಹ ಬೋರ್ ವೆಲ್ ಗಳು ಕೆಟ್ಟಲ್ಲಿ ಪರ್ಯಾಯವಾಗಿ ಖಾಸಗಿ ಬೋರ್ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ಕನಿಷ್ಠ 3-6 ತಿಂಗಳುಗಳ ವರಿಗೆ ತಿಂಗಳೊಂದಕ್ಕೆ 18 ಸಾವಿರ ಹಣ ಬಾಡಿಗೆ ಕೊಟ್ಟು, ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಪಿಡಿಒಗಳಿಗೆ ಸೂಚಿಸಿದರು. ರಾಜ್ಯ ಸರ್ಕಾರವು ಜನರ ಹಿತಕ್ಕಾಗಿ ಎಲ್ಲಾ ಗ್ಯಾರೆಂಟಿಗಳನ್ನು, ಸಮರ್ಪಕವಾಗಿ ಜಾರಿ ಮಾಡುವುದರ ಜೊತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒಲವು ತೋರಿದೆ. ಅದಕ್ಕಾಗಿ ನಮ್ಮ ಕೂಡ್ಲಿಗಿ ಕ್ಷೇತ್ರಕ್ಕೆ ಸರ್ಕಾರ ರಚನೆಯಾಗಿ ವರ್ಷ ತುಂಬು ದೊರೊಳಗಾಗಿ, ಎಲ್ಲಾ ಇಲಾಖೆಗಳಿಗೆ ಒಳಗೊಂಡಂತೆ 550 ಕೋಟಿ ರೂ. ಅನುದಾನ ನೀಡಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಬರ ಪೀಡಿತ ಹಣೆ ಪಟ್ಟಿಯಿಂದ ಕೂಡ್ಲಿಗಿ ಕ್ಷೇತ್ರವನ್ನು ತೆಗೆಯಲು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಾವು ಕೂಡ ಹಗಲಿರುಳು ಶ್ರಮಿಸುವುದರೊಂದಿಗೆ, ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವುದಾಗಿ ಶಾಸಕ ಡಾ. ಶ್ರೀನಿವಾಸ್ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು