ಇತ್ತೀಚಿನ ಸುದ್ದಿ
ಡಾ.ಅಮಿತ್ ನಾಥ್ ತಂಡದಿಂದ ಒಂದೇ ವರ್ಷದಲ್ಲಿ 150 ಕೋಟಿ ರೂಪಾಯಿ ವ್ಯವಹಾರ: ಜನರಿಗೆ ವ್ಯವಹಾರ ನಡೆಸುವ ಬಗ್ಗೆ ತರಬೇತಿ
05/02/2024, 23:47
ಬೆಂಗಳೂರು(reporterkarnataka.com): ಭಾರತೀಯ ವ್ಯಾಪಾರ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಡಾ.ಅಮಿತ್ ನಾಥ್ ಅವರ ತಂಡ ಕಳೆದ ಒಂದು ವರ್ಷದಲ್ಲಿ 150 ಕೋಟಿ ರೂಪಾಯಿಗಳ ಬ್ಯುಸಿನೆಸ್ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ತಂಡ ಗಳಿಸಿದ ಈ ಒಂದು ಯಶಸ್ಸನ್ನು ಅವಿಸ್ಮರಣೀಯವಾಗಿಸುವ ಉದ್ದೇಶದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಭಾರತೀಯ ಬ್ಯುಸಿನೆಸ್ ಉದ್ಯಮದಲ್ಲಿ ಮಾಸ್ಟರ್ ಮೈಂಡ್ ಎನಿಸಿರುವ ಅಮಿತ್ ನಾಥ್ ಅವರು ತಮ್ಮ ಎಫ್ಇಎಸ್ ಟಿ ಎಂಬ ಬ್ಯುಸಿನೆಸ್ ಕೋರ್ಸ್ ಮೂಲಕ ಕಳೆದ 10 ತಿಂಗಳಲ್ಲಿ ದೇಶಾದ್ಯಂತದ 5 ಸಾವಿರಕ್ಕೂ ಅಧಿಕ ಜನರಿಗೆ ವ್ಯವಹಾರ ನಡೆಸುವ ಬಗ್ಗೆ ತರಬೇತಿ ನೀಡಿದ್ದಾರೆ ಮತ್ತು ಅವರನ್ನು ನುರಿತ ಮಾಸ್ಟರ್ ಕ್ಲೋಸರ್ ಗಳನ್ನಾಗಿ ಮಾಡಿದ್ದಾರೆ.
ಈ ಅಭೂತಪೂರ್ವ ಯಶಸ್ಸನ್ನು ಆಚರಿಸುವುದು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಹಾಗೂ ಭಾರತೀಯ ವ್ಯಾಪಾರ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಇತರರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ತಮ್ಮ ಕ್ಲೋಸಿಂಗ್ ಡೀಲ್ಸ್ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಅಲ್ಲದೇ, ವ್ಯಾಪಾರದ ಬೆಳವಣಿಗೆಯ ಬಗೆಗಿನ ಉತ್ತಮ ಅಭ್ಯಾಸಗಳು, ಯಶಸ್ಸಿಗೆ ಕಾರಣವಾದ ಪ್ರಕರಣಗಳು, ಪ್ರಶಂಸೆಗಳ ವಿನಿಮಯ ಮತ್ತು ಇನ್ನೂ ಹೆಚ್ಚಿನ ವಿಚಾರಗಳನ್ನು ಚರ್ಚಿಸಿದರು. ಈ ವಿಶೇಷ ಸಮಾರಂಭದಲ್ಲಿ ಸುಮಾರು 30 ಜನರು ಭಾಗಿಯಾಗಿದ್ದರು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದವರು ಏರೋಸ್ಪೇಸ್, ಪ್ಲಾಸ್ಟಿಕ್ ತಯಾರಿಕೆ, ಸೆಕ್ಯೂರಿಟಿ ಕ್ಯಾಮೆರಾ ಉದ್ಯಮ, ಸಣ್ಣ ವ್ಯಾಪಾರಿಗಳು ಮತ್ತು ಉದ್ಯೋಗಸ್ಥ ವೃತ್ತಿಪರರಾಗಿದ್ದಾರೆ. ಡಾ.ನಾಥ್ ಅವರು ಈ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ರಚಿಸಲಾದ ಕ್ಲೋಸರ್ ಗಳಿಗಾಗಿ ತಮ್ಮ ಸೀಮಿತ ಆವೃತ್ತಿಯ `ಬ್ಲ್ಯಾಕ್ ಬುಕ್’ ಅನ್ನು ಹಂಚಿಕೊಂಡರು. ಕ್ರ್ಯಾಕಿಂಗ್ ಡೀಲ್ಸ್, ವಿಧಾನಗಳು ಮತ್ತು ಪ್ಲಾಟ್ ಫಾರ್ಮ್ ಕ್ಲೋಸಿಂಗ್ ಪ್ರಸ್ತುತಪಡಿಸುವ ಬಗ್ಗೆ ಕೆಲವು ಸಲಹೆಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಫೆಸ್ಟಿಯನ್ ಗಳ ಯಶಸ್ಸು ಮತ್ತು ಈ ಕ್ಲೋಸ್ಡ್ ಈವೆಂಟ್ ಬಗ್ಗೆ ಮಾತನಾಡಿದ ಡಾ.ಅಮಿತ್ ನಾಥ್ ಅವರು, “ಈ ಕಾರ್ಯಕ್ರಮದಲ್ಲಿ 30 ಮಂದಿ ಪಾಲ್ಗೊಂಡಿದ್ದು, ಇವರು 150 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವ್ಯಾಪಾರ ನಡೆಸಿದ್ದಾರೆ. ಒಂದು ವೇಳೆ ಇಡೀ ಫೆಸ್ಟ್ ಕುಟುಂಬದ ಸದಸ್ಯರೆಲ್ಲರೂ ಸೇರಿದ್ದರೆ ಈ ಮೊತ್ತ 200 ಕೋಟಿ ರೂಪಾಯಿಗೂ ಅಧಿಕವಾಗುತ್ತಿತ್ತು. ಇದು ಫೆಸ್ಟ್ ಮತ್ತು ಫೆಸ್ಟಿಯನ್ ಗಳ ಶಕ್ತಿಯಾಗಿದೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ನನ್ನ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರ ಸಮಪರ್ಣೆ ಮತ್ತು ಫೆಸ್ಟ್ ತತ್ತ್ವಗಳು ಮತ್ತು ತಂತ್ರಗಳನ್ನು ಬಳಸುವ ಮೂಲಕ ಅವರು ಇಷ್ಟು ವ್ಯಾಪಾರವನ್ನು ನಡೆಸಲು ಸಮರ್ಥರಾಗಿದ್ದಾರೆ. ಅವರ ಉತ್ಸಾಹ, ಫೆಸ್ಟ್ ತತ್ತ್ವಗಳ ಮೇಲಿನ ನಂಬಿಕೆ ಮತ್ತು ನವೀನ ತಂತ್ರಗಳನ್ವಯದೊಂದಿಗೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಪ್ರತಿಯೊಬ್ಬ ಫೆಸ್ಟಿಯನ್ ಗಳು ತಮ್ಮ ಆದಾಯವನ್ನು ದ್ವಿಗುಣ/ಮೂರು ಪಟ್ಟು ಹೆಚ್ಚಿಸಿಕೊಳ್ಳಬಹುದು ಮತ್ತು ಅವರು ಇನ್ನಷ್ಟು ಎತ್ತರವನ್ನು ತಲುಪಬಹುದು’’ ಎಂದರು.
ಡಾ.ಅಮಿತ್ ನಾಥ್ ಅವರು ವಿನ್ಯಾಸಗೊಳಿಸಿರುವ ಫೆಸ್ಟ್ ಹೆಸರಿನ ಈ ವ್ಯವಹಾರ ಕೋರ್ಸ್ ನಮ್ಮ ವೇದ ಪುಸ್ತಕಗಳಾದ ಶ‍್ರೀಮದ್ ಭಗವದ್ಗೀತೆ, ಸಮುದ್ರಶಾಸ್ತ್ರ ಮತ್ತು ಮಾನವ ಮನೋವಿಜ್ಞಾನದ ಒಳನೋಟಗಳಿಂದ ಅಜೇಯ ಪ್ರಾಚೀನ ವೈದಿಕ ತಂತ್ರಗಳನ್ನು ಆಧರಿಸಿದೆ.
ಡಾ.ಅಮಿತ್ ನಾಥ್ ಅವರು AMKAN ನ ಸಂಸ್ಥಾಪಕರಾಗಿದ್ದಾರೆ ಮತ್ತು ಈ ಹಿಂದೆ 1500ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬೆಂಗಳೂರಿನಿಂದ ಹೊರಗಿದ್ದರೂ ಅವರು ದೇಶಾದ್ಯಂತ ತಮ್ಮ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ಕಾರ್ಯಕ್ರಮ ಫೆಸ್ಟ್ ಉದ್ಯಮದ ಎಲ್ಲಾ ಮಾಪಕಗಳು, ವ್ಯಕ್ತಿಗಳು, ಗೃಹಿಣಿಯರು ಮತ್ತು ವ್ಯಾಪಾರಸ್ಥ ಮಹಿಳೆಯರಿಗೆ ಮುಕ್ತವಾಗಿದೆ. ಅಲ್ಲದೇ ಮುಖ್ಯವಾಗಿ ಇದಕ್ಕೆ ಸೇರಿಕೊಳ್ಳಲು ಯಾವುದೇ ಶಿಕ್ಷಣದ ಹಿನ್ನೆಲೆ ಅಥವಾ ವಯಸ್ಸಿನ ಮಾನದಂಡ ಇರುವುದಿಲ್ಲ.