10:00 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಸರಕಾರದ ಆದೇಶಗಳಿಗೇ  ಕಿಮ್ಮತ್ತು ನೀಡದ ಈಚನಾಳ ಗ್ರಾಮ ಪಂಚಾಯಿತಿ ಪಿಡಿಒ…!!! 

18/05/2021, 15:25

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ದಿನದಿಂದ ದಿನಕ್ಕೆ ಕೊರೋನಾ  ಸೋಂಕಿತರ ಸಂಖ್ಯೆ ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಗ್ರಾಮಿಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗತೊಡಗಿದೆ. ಈ ಕುರಿತು ಸರ್ಕಾರ ಗ್ರಾಮ ಪಂಚಾಯತ್ ಇಲಾಖೆ ಗಳಿಗೇ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಹೊರಡಿಸಿದೆ ನಿಜ…..!!! ಆದರೆ ಆ ಆದೇಶ ಪ್ರತಿಗಳಿ ಗೇ  ಬೆಲೆ ಯೇ ಇಲ್ಲವೆಂಬಂತೆ ಕಸದ ಬುಟ್ಟಿ ಸೇರುತ್ತಿವಿಯಾ??? ಎಂಬ ಅಭಿಪ್ರಾಯ ಸಾರ್ವಜನಿಕ ವಲಯಗಳಲ್ಲಿ ದಟ್ಟವಾಗಿ ಹಬ್ಬುತ್ತೀವೆ. ಏಕೆಂದರೆ ಪ್ರಸ್ತುತ ಈಚನಾಳ ಗ್ರಾಮ ಪಂಚಾಯತ್ ಪಿಡಿಒ ಸರ್ಕಾರ ದ ಆದೇಶ ಗಳನ್ನ ಉಲ್ಲಂಘಿಸುವ ಮೂಲಕ ಬೆಜವ್ದಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 

ಕೊವಿಡ್ – 19 ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಜಾಗೃತಿ ಅಭಿಯಾನ ಮಾಡಿಲ್ಲ, ಗ್ರಾಮ ಗಳಲ್ಲಿ ಸ್ಯಾನಿಟೈಜರ್ ಕೂಡ ಮಾಡಿಸುತ್ತಿಲ್ಲ, ಅಲ್ಲದೇ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಕೂಡ ಪಿಡಿಒ ಹಾಜರಾಗುತ್ತಿಲ್ಲ. ಅದಲ್ಲದೇ ಗ್ರಾಮಿಣ ಭಾಗದ ಜನರಿಗೆ ಆಸರೆ ಯಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕೂಡ ಅಸಹಕಾರ ತೋರಿಸುತ್ತಿದ್ದಾರೆ. ಸರ್ಕಾರ ನರೇಗಾ ಯೋಜನೆಯಡಿ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಲು ಆದೇಶ ನೀಡಿದರೂ ಕೂಡ ಅರ್ಜಿ ಸ್ವಿಕರಿಸುತ್ತಿಲ್ಲ, ಒಟ್ಟಾರೆ ಸರ್ಕಾರ ದ ಆದೇಶ ಕ್ಕೂ ನನಗೇ ಸಂಬಂಧವಿಲ್ಲದಂತೆ ಕಾರ್ಮಿಕರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಪಿಡಿಒ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ನರೇಗಾ ಯೋಜನೆಯಡಿ ಕೆಲಸ ದ ಬೇಡಿಕೆ ಸ್ವಿಕರಿಸುವಂತೆ ಸರ್ಕಾರ ದ ಆದೇಶ ಹೊರಡಿಸಿದರೂ ಕೂಡ ಪಿಡಿಒ ಅರ್ಜಿ ಸ್ವಿಕರಿಸುತ್ತಿಲ್ಲ,ಈ ಬಗ್ಗೆ ಸಹಾಯಕ ನಿರ್ದೇಶಕ ರ ಗಮನಕ್ಕೆ ತಂದರೂ ಕೂಡ ಪಿಡಿಒ ಅರ್ಜಿ ಸ್ವಿಕರಿಸಲಿಲ್ಲ, ತದನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಾಟ್ಸಪ್ ಮೂಲಕ ಸಮಸ್ಯೆ ಹೇಳಿಕೊಂಡಾಗ ಸಮಸ್ಯೆ ಗೇ  ಸ್ಪಂದಿಸಿದ ಇಓ  ಅಧಿಕಾರಿಗಳು, ಪಿಡಿಒ ಗೇ ಅರ್ಜಿ ಸ್ವಿಕರಿಸುವಂತೆ ಹೇಳಿದಾಗ ಮಾತ್ರ, ಪಿಡಿಒ ಅರ್ಜಿ ಸ್ವಿಕರಿಸಿದರೂ ಕೂಡ ಸ್ವಿಕೃತಿ ನೀಡದೇ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. 

ಶರಣ ಬಸವ, ಈಚನಾಳ ಕರುನಾಡ ವಿಜಯ ಸೇನೆ ತಾಲೂಕು ವಕ್ತಾರ

ಇತ್ತೀಚಿನ ಸುದ್ದಿ

ಜಾಹೀರಾತು