6:14 AM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಚಳ್ಳಕೆರೆ: ರಾಷ್ಟಿಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ

25/01/2024, 17:26

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟಿಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶ್ ನಾಯ್ಕ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು. ಶಿಸ್ತಿನ ಸಂಚಾರ, ಸುಗಮ ಸಂಚಾರಕ್ಕೆ ಹಾದಿ ಎಂಬುದನ್ನು ತಿಳಿದಿರಬೇಕು. ಇಲ್ಲವಾದಲ್ಲಿ ಅಪಾಯಕಾರಿ. ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಇದರ ಉದ್ದೇಶ ಎಂದು ಅವರು ನುಡಿದರು.
‘ನೆಮ್ಮದಿಯ ಬಾಳಿಗೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.ಇದರಲ್ಲಿ ಪ್ರಮುಖವಾಗಿ ರಸ್ತೆ ಅಪಘಾತಗಳು, ಸಾರ್ವಜನಿಕರಿಗೆ ಸಂಚಾರ ಸುರಕ್ಷತಾ ಸೂಚನೆಗಳು, ರಸ್ತೆ ಅಪಘಾತ ನಿಯಂತ್ರಣ, ರಸ್ತೆ ಸುರಕ್ಷೆ ಮತ್ತು ಜೀವನ ರಕ್ಷೆ, ಮಕ್ಕಳು ಏನು ಮಾಡಬೇಕು, ವಾಹನ ಚಾಲಕರು ಏನು ಮಾಡಬೇಕು, ಪಾದಚಾರಿಗಳು ಹೇಗೆ ಸಂಚರಿಸಬೇಕು, ಸಂಚಾರಿ ಗೆರೆಗಳು, ಸಂಚಾರದ ಸಂಕೇತಗಳು, ಸುಗಮ ಸಂಚಾರಕ್ಕೆ ಸುಲಭ ಉಪಾಯಗಳು, ಕಡ್ಡಾಯವಾಗಿ ಪಾಲಿಸಬೇಕಾದ ಚಿಹ್ನೆಗಳು, ಕಾಲು ನಡಿಗೆಯ ಸುರಕ್ಷಿತ ದಾರಿ, ಸಿಗ್ನಲ್‌ನಲ್ಲಿ ಆಗುವ ಅಪಘಾತಗಳು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿಹೇಳಲಾಗುತ್ತದೆ‌. ಈ ಮೂಲಕ ಸುರಕ್ಷಿತ ಮತ್ತು ಸುವ್ಯವಸ್ಥಿತ ಸಂಚಾರದೆಡೆಗೆ ಮುಂದಗಬೇಕಿದೆ. ಹಾಗೆಯೇ ಎಲ್ಲರೂ ಹೀಗಿನ ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ ಎಲ್ಲರೂ ಸಹ ಡ್ರೈವಿಂಗ್ ಪರವಾನಿಗೆ ಮಾಡಿಸಿಕೊಳ್ಳಿ ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಂ. ಬೇನಾಲ್ ರವರು ಮಾತನಾಡಿ, ರಸ್ತೆ ಅಪಘಾತದಲ್ಲಿ ಸಾಕಷ್ಟು ಜನರು ಅಪಘಾತಕ್ಕೆ ಇಡಗುತ್ತಿದ್ದಾರೆ. ಇಂತಹ ಜನರಿಗೆ ನಾವು ರಕ್ತವನ್ನು ದಾನಮಾಡಿ ಅವರ ಜೀವ ಉಳಿಸಿ ಎಂದರು. ಎನ್.ಎಸ್.ಎಸ್ ಶಿಬಿರದಲ್ಲಿ ನೋಂದಹಿಸಿದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ವಿದ್ಯಾರ್ಥಿಗಳು ಮಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಹಾಸ್ಎನ್., ಜಿಲ್ಲಾ ಯುವಜನ ಅಧಿಕಾರಿ ನೆಹರು ಯುವ ಕೇಂದ್ರ ಚಿತ್ರದುರ್ಗ ಮತ್ತು ಶ್ರೀ ಮಜಹಾರ್ ಉಲ್ಲಾ ಎನ್., ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ. ತಿಮ್ಮಪ್ಪ ಬಾಲಾಜಿ ರಕ್ತ ನಿಧಿ ಕೇಂದ್ರ ಚಳ್ಳಕೆರೆ. ಮತ್ತು ಡಾ. ಲಕ್ಷ್ಮಿ ದೇವಮ್ಮ ಯುವ ರೆಡ್ ಕ್ರಾಸ್ ಸಂಯೋಜಕರು ಇಂಜಿನಿಯರ್ ಕಾಲೇಜು ಚಳ್ಳಕೆರೆ. ಹಾಗೆಯೇ ಮಲ್ಲಿಕಾರ್ಜುನ ಎ. ಐ. &ಎಂ. ಎಲ್ ಸಹಾಯಕ ಪ್ರಧ್ಯಾಪಕರು. ನಾಗಾರ್ಜುನ ಎಸ್ ದೈಹಿಕ ನಿರ್ದೇಶಕರು. ಇಂಜಿನಿಯರ್ ಕಾಲೇಜು ಚಳ್ಳಕೆರೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು