5:59 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಮಸ್ಕಿ ಜಲಾಶಯಕ್ಕೆ ನೂತನ ಶಾಸಕ ತುರ್ವಿಹಾಳ ಬಾಗಿನ ಸಮರ್ಪಣೆ; ರಸ್ತೆ ಕಾಮಗಾರಿಗೆ ಚಾಲನೆ

08/08/2021, 13:35

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮಸ್ಕಿ ಮಾರಲದಿನ್ನಿ ಡ್ಯಾಂ ಜಲಾಶಯಕ್ಕೆ ನೂತನ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಬಾಗಿನ ಸಮರ್ಪಿಸಿದರು.

ರೈತರ ಹಿತಕ್ಕಾಗಿ, ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಕೊಡಲು ಸದಾ ಸಿದ್ದ. ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ  ಶಾಸಕ ಬಸವನಗೌಡ ತುರುವಿಹಾಳ ಹೇಳಿದರು.

ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಹೂವಿನಭಾವಿ, ಹನುಮಂತಪ್ಪ ಮುದ್ದಾಪೂರು, ಎಚ್. ಬಿ. ಮುರಾರಿ, ಮೈಬುಸಾಬ ಮುದ್ದಾಪೂರು ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಂಜಿನಿಯರಿಂಗ್ ಇಲಾಖೆ 2020-21ನೇ ಸಾಲಿನ ಬಿ ಆರ್ ಜಿ ಎಫ್ ಯೋಜನೆಡಿಯಲ್ಲಿ ಮಸ್ಕಿ ಲಿಂಗಸಗೂರು ಎನ್ ಎಚ್ 150ಎ ರಸ್ತೆಯಿಂದ ಮಾರಲದಿನ್ನಿವರೆಗೆ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಬಸನಗೌಡ ತುರವಿಹಾಳ ಚಾಲನೆ ನೀಡಿದರು. ಮಧ್ಯಾಹ್ನ ಗಚ್ಚಿನ ಹಿರೇಮಠದ ಕಲ್ಯಾಣ ಮಂಟಪದಲ್ಲಿ ನೌಕರರ ಸಂಘದ ಮತ್ತು ಶಿಕ್ಷಕರ ಸಂಘ ಸ್ಕೌಟ್ ಅಂಡ್ ಗೈಡ್ಸ್ ವತಿಯಿಂದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮೂರು ಸಂಘದ ವತಿಯಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸ್ವಾಮಿ ಶಿಕ್ಷಕ ಹಂಪನಾಳ,

ಶಿಕ್ಷಕರ ಮತ್ತು ಅವರ ಬೇಡಿಕೆಗಳು ಈಡೇರಿಸಬೇಕು ಮತ್ತು  ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಮಸ್ಕಿ ಕಾಯಂಗೊಳಿಸಬೇಕು. ಲಿಂಗಸ್ಗೂರು ಮಾನ್ವಿ ಸಿಂಧನೂರ್ ಸಂಪನ್ಮೂಲ ಶಿಕ್ಷಣ ಕೇಂದ್ರ ಕಿರಲ್ ಆಗುವುದರಿಂದ ಶಿಕ್ಷಕರ ಬಹಳ ತೊಂದರೆಯಾಗುತ್ತಿದ್ದು, ಆದ ಕಾರಣ ಮಸ್ಕಿ ಕ್ಷೇತ್ರಕ್ಕೆ ಸಂಬಂಧಪಡುವ ಸಂಪನ್ಮೂಲ ಕಲ್ಪಿಸಿಕೊಡಬೇಕು. 

ಸರಕಾರಿ ನೌಕರರ ಸಮಸ್ಯೆಯ 
ಪರಿಹರಿಸಬೇಕು, ಹಳೆ ಶಾಲಾ ಕಟ್ಟಡಗಳು ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡಗಳ ಪೂರ್ಣಗೊಳಿಸಬೇಕು, ಶಿಕ್ಷಕರಿಗೆ ಸಂಬಂಧ ಎಲ್ಲಾ ಸಮಸ್ಯೆ ಪರಿಹರಿಸಬೇಕು, ಮಸ್ಕಿ ತಾಲೂಕ್ ಆಗಿ ಮೂರು ವರ್ಷ ಗತಿಸಿದರು ಮಸ್ಕಿಯಲ್ಲಿ ಸುಮಾರು 48 ಸರಕಾರಿ ಕಚೇರಿಗಳು ಮಸ್ಕಿಯಲ್ಲಿ ಆದರೆ ಹೆಸರಿಗಷ್ಟೇ 4 ಅಥವಾ 5 ಸರಕಾರಿ ಕಚೇರಿಗಳು ಪ್ರಾರಂಭವಾಗಿವೆ, ಮಿಕ್ಕದನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯ ಅಧಿಕಾರಿ, ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು