8:34 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಂದ ಬಡ ರೋಗಿಗಳ ಲೂಟಿ: ಹಣ ಹಿಂತಿರುಗಿಸುವಂತೆ ಚಾಟಿ ಬೀಸಿದ ಜಿಲ್ಲಾಧಿಕಾರಿ

08/08/2021, 11:30

ಮಂಗಳೂರು(reporterkarnataka.com): ನಗರದ 7 ಖಾಸಗಿ ಆಸ್ಪತ್ರೆಗಳಿಂದ ಹಣ ಕಕ್ಕಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮುಂದಾಗಿದ್ದಾರೆ. ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಹಣ ವಾಪಸ್ ನೀಡುವಂತೆ ಜಿಲ್ಲಾಧಿಕಾರಿ  ಈ ಆಸ್ಪತ್ರೆಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.

ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಿದ ಬಗ್ಗೆ ಮತ್ತು ರೋಗಿಗಳಿಂದ ಹೆಚ್ಚುವರಿ ಬಿಲ್ ಪಡೆದ ಖಾಸಗಿ  ಆಸ್ಪತ್ರೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಫುಲ್ ಗರಂ ಆಗಿದ್ದಾರೆ.


ಜಿಲ್ಲಾಧಿಕಾರಿಯವರು ಸಂತ್ರಸ್ತ ರೋಗಿಗಳಿಗೆ ಒಂದು ವಾರದೊಳಗೆ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ರೋಗಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ವೀಕೃತಿ ರಶೀದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸುವಂತೆ ನಿರ್ದೇಶನ ನೀಡಿದ್ದಾರೆ.

ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಇರುವ ಕೆಎಂಸಿ, ಅಥೆನಾ ಆಸ್ಪತ್ರೆ, ಇಂಡಿಯಾನ, ಶ್ರೀನಿವಾಸ ಆಸ್ಪತ್ರೆ, ದೇರಳಕಟ್ಟೆಯ ಕಣಚೂರು ಆಸ್ಪತ್ರೆ, ಎಸ್ ಸಿಎಸ್ ಹಾಗೂ ಕೆ. ಎಸ್. ಹೆಗ್ಡೆ ಆಸ್ಪತ್ರೆಗಳು ಅಧಿಕ ಬಿಲ್ ಹಾಗೂ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆಯ ಪಟ್ಟಿಗೆ ಸೇರಿವೆ. ತಕ್ಷಣ ರೋಗಿಗಳಿಗೆ ಹಣ ವಾಪಸ್ ನೀಡುವಂತೆ ಈ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಹೆಚ್ಚುವರಿ ಹಣ ವಸೂಲಿ ಕುರಿತಂತೆ ಸಂಬಂಧಿಸಿದ ರೋಗಿಗಳು ಆಸ್ಪತ್ರೆಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಯವರು ಹಣ ವಾಪಸ್ ನೀಡುವಂತೆ  ಆಗಸ್ಟ್ 2ರಂದು ನೀಡಿದ ಆದೇಶದಲ್ಲಿ ತಾಕೀತು ಮಾಡಿದ್ದಾರೆ.

ರಾಜೇಶ್ ಎಂಬವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವ ಬದಲು ಡಿಲಕ್ಸ್ ರೂಮ್ ನಲ್ಲಿ ಚಿಕಿತ್ಸೆ ನೀಡಿ ಯೋಜನೆಯಡಿ ಚಿಕಿತ್ಸೆ ನೀಡಲು ತಪ್ಪಿಸಿದ ಆರೋಪ ಎದುರಿಸಿದ ಅಥೆನಾ ಆಸ್ಪತ್ರೆಗೆ 50 ಸಾವಿರ ರೂ.ವನ್ನು ರೋಗಿಗೆ ಹಿಂತಿರುಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಶಂಶುದ್ದೀನ್ ಪ್ರಕರಣದಲ್ಲಿ ಕೆಎಂಸಿ ಆಸ್ಪತ್ರೆ 78 ಸಾವಿರ ರೂ., ಮಹಮ್ಮದ್ ಕೆ. ಹುಸೈನ್ ಪ್ರಕರಣದಲ್ಲಿ ಇಂಡಿಯಾನ ಆಸ್ಪತ್ರೆ 50 ಸಾವಿರ ರೂ.,ಪದ್ಮನಾಭ ಪ್ರಕರಣದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆ10 ಸಾವಿರ ರೂ.,ತುಕರಾಮ್ ಪ್ರಕರಣದಲ್ಲಿ ಎಸ್ ಸಿಎಸ್ ಆಸ್ಪತ್ರೆ 1.50 ಲಕ್ಷ ರೂ.,ಸಯ್ಯದ್ ಮೊಯುದ್ದೀನ್ ಪ್ರಕರಣದಲ್ಲಿ ದೇರಳಕಟ್ಟೆ ಕಣಚೂರು ಆಸ್ಪತ್ರೆ 20 ಸಾವಿರ ರೂ. ಹಾಗೂ ಪಾರ್ವತಿ ಪ್ರಕರಣದಲ್ಲಿ ಶ್ರೀನಿವಾಸ ಆಸ್ಪತ್ರೆ 11,067 ರೂ. ಹಿಂತಿರುಗಿಸುವಂತೆ ಡಿಸಿ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು