6:09 PM Friday21 - November 2025
ಬ್ರೇಕಿಂಗ್ ನ್ಯೂಸ್
ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ…

ಇತ್ತೀಚಿನ ಸುದ್ದಿ

ಪ್ರಸಿದ್ಧ ಕವಿ, ಭಾವಲೋಕದ ರಾಯಭಾರಿ ಜಯಂತ್ ಕಾಯ್ಕಿಣಿಗೆ ವಿಶ್ವಪ್ರಭಾ ಪುರಸ್ಕಾರ: ಜ. 24ರಂದು ಉಡುಪಿಯಲ್ಲಿ ಪ್ರದಾನ.

18/01/2024, 18:09

ಉಡುಪಿ(reporterkarnataka.com): ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ವಿಶ್ವಪ್ರಭಾ ಪುರಸ್ಕಾರ- 2024 ಪ್ರಶಸ್ತಿಗೆ ಪ್ರಸಿದ್ಧ ಕವಿ, ಬರಹಗಾರ, ಭಾವಲೋಕದ ರಾಯಭಾರಿ ಜಯಂತ್ ಕಾಯ್ಕಿಣಿ ಆಯ್ಕೆಯಾಗಿದ್ದು, ಜನವರಿ 24ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸಂಜೆ 5:45ಕ್ಕೆ ಪುರಸ್ಕಾರ ಪ್ರದಾನ ನಡೆಯಲಿದೆ.
ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ ಮತ್ತು ಭಾವಲೋಕದ ರಾಯಭಾರಿ ಹಾಡುಗಳ ಗಾರುಡಿಗ ಕವಿ ಜಯಂತ್ ಕಾಯ್ಕಿಣಿ.
ತಮ್ಮ ಸುಂದರ- ಶುದ್ಧ ಕವಿತೆಗೆಳ ಮೂಲಕ ಕನ್ನಡ ಜನತೆಯ ಹೃದಯದಲ್ಲಿ ನೆಲೆಸಿದವರು ಮನೆ ಮಾತಾದವರು. ಹದಿಹರೆಯದ ಮನದ ಮಿಡಿತವಾದವರು. ಕಾಯ್ಕಿಣಿಯವರು ಕೇವಲ ಕವಿಯಾಗಿರದೇ ಲೇಖಕರಾಗಿಯೂ ಪ್ರಸ್ತುತರು.
ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಇವರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ ವ್ಯಕ್ತಿತ್ವ ಅವರದು.
1955 ಕರ್ನಾಟಕ ಕರಾವಳಿ ತೀರ ಗೋಕರ್ಣದಲ್ಲಿ ಜನಿಸಿದರು. ತಂದೆ ಗೌರೀಶ್ ಕಾಯ್ಕಿಣಿ ಶಿಕ್ಷಕರು ಮತ್ತು ಖ್ಯಾತ ಬರಹಗಾರರು, ತಾಯಿ ಶಾಂತಾ ಸಮಾಜಸೇವಕಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಿಂದ ಜೀವ ರಸಾಯನಿಕ ಶಾಸ್ತ್ರದಲ್ಲಿ ಪದವಿ ಪಡೆದ ಇವರು ಬಯೋ ಕೆಮಿಸ್ಟ್ ಆಗಿ ಬಾಂಬೆಯಲ್ಲಿ ಉದ್ಯೋಗ ಆರಂಭಿಸಿದರು. ನಂತರ ಮಡದಿ ಸ್ಮಿತಾರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದರು.
1974ರಲ್ಲಿ ಪ್ರಕಟಿತಗೊಂಡ `ರಂಗದಿಂದೊಷ್ಟು ದೂರ’ ಕವನ ಮಾಲಿಕೆಯಿಂದ ಇವರ ಸಾಹಿತ್ಯ ಕೃಷಿ ಆರಂಭವಾಯಿತು. ಆಗ ಕೇವಲ 19 ವರ್ಷದ ಯುವಕನಾಗಿದ್ದ ಕಾಯ್ಕಿಣಿಯವರು ತಮ್ಮ ಮೊದಲ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಕೆಲವು ಕವನ-ಗುಚ್ಚಗಳ ನಂತರ `ತೆರೆದಷ್ಟೇ ದೂರ’ ಎಂಬ ಕಥಾ-ಸಂಕಲನ ಬರೆದರು. ಕಥಾ-ಪ್ರಪಂಚ, ನಾಟಕ ಮತ್ತು ಗೀತ ಸಾಹಿತ್ಯ ಪ್ರಕಾರದಲ್ಲಿ ಹೆಚ್ಚಾಗಿ ಕೃಷಿ ಮಾಡಿರುವ ಇವರು ನಾಲ್ಕು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ ಅವರಿಗೆ ’ಫಿಲಂಫೇರ್’ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.
ಎಲ್ಲರ ಪ್ರೀತಿಯನ್ನು ಪುರಸ್ಕಾರದಂತೆ ಸ್ವೀಕರಿಸುವ ಸರಳತೆಯ ಪ್ರತೀಕ ಜಯಂತ ಕಾಯ್ಕಿಣಿ.

ಇತ್ತೀಚಿನ ಸುದ್ದಿ

ಜಾಹೀರಾತು