ಇತ್ತೀಚಿನ ಸುದ್ದಿ
ಅತ್ತ ಬಾನಂಗಳದಲ್ಲಿ ಹಾರುತ್ತಾ ಸ್ಪೀಕರ್ ಖಾದರ್ ಸಂಭ್ರಮಿಸುತ್ತಿದ್ದರೆ, ಇತ್ತ ನೆಲದಲ್ಲಿ ನಿಂತು ಪುಟಾಣಿಗಳು ಕೇಕೆ ಹಾಕುತ್ತಿದ್ದರು!!
14/01/2024, 14:10
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಉಕ್ಕಿನ ಹಕ್ಕಿ ಎಂದೇ ಕರೆಯಲ್ಪಡುವ ಹೆಲಿಕಾಪ್ಟರ್ ಬಂದು ಇಳಿದಿರುವುದೇ ಆ ಊರಿಗೆ ವಿಶೇಷವಾಗಿತ್ತು!. ಅಲ್ಲಿಯವರು, ಅದರಲ್ಲೂ ಶಾಲೆಗೆ ಹೋಗುವ ಪುಟಾಣಿಗಳು ಗಿರ್ಮಿಟ್(ಹಾತೆ) ತರಹದ ಹೆಲಿಕಾಪ್ಟರ್ ಅನ್ನು ಹತ್ತಿರದಿಂದ ನೋಡಿರುವುದೇ ಇದೇ ಮೊದಲ ಬಾರಿಗೆ!!.
ಇದೆಲ್ಲ ನಡೆದದ್ದು ಮಂಗಳೂರು ಹೊರವಲಯದ ನರಿಂಗಾಣದ ಕಲ್ಲರಕೋಡಿಯಲ್ಲಿ. ಅಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಕಂಬಳೋತ್ಸವ ಸಂಭ್ರಮವನ್ನು ಕಣ್ಣು ತುಂಬಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ತನ್ನ ಸ್ವಕ್ಷೇತ್ರವಾದ ಮಂಗಳೂರು(ಉಳ್ಳಾಲ ಕ್ಷೇತ್ರ) ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಸೇರಿದ ನರಿಂಗಾಣದಲ್ಲಿ ಸರಕಾರದ ವತಿಯಿಂದ ನಡೆಯುವ ಕಂಬಳವನ್ನು ವೈಮಾನಿಕವಾಗಿ ನೋಡುವ ವ್ಯವಸ್ಥೆ ಮಾಡಲಾಗಿತ್ತು. ತುಳುನಾಡಿನ ಜನಪದ ಕ್ರೀಡೆಯಾದ ಕಂಬಳದ ದೃಶ್ಯ ವೈಭವವನ್ನು ಖಾದರ್ ಅವರು
ಹೆಲಿಕಾಪ್ಟರ್ ಮೂಲಕ ಕಣ್ತುಂಬಿಸಿಕೊಂಡರೆ, ನರಿಂಗಾಣದ ಶಾಲಾ ಮಕ್ಕಳು ಹೆಲಿಕಾಪ್ಟರ್ ಅನ್ನು ಕಣ್ತುಂಬಿ
ಸಿಕೊಂಡರು. ಅತ್ತ ಸ್ಪೀಕರ್ ಖಾದರ್ ಅವರಿಗೂ ಖುಷಿಯೇ ಖುಷಿ, ಇತ್ತ ಪುಟಾಣಿಗಳಿಗೂ ಖುಷಿಯೇ ಖುಷಿ.
ಹೆಲಿಕಾಪ್ಟರ್ ಇಳಿಯುವುದನ್ನು, ಅದು ಮೇಲೇರುವುದನ್ನು ಕಾಣಬೇಕಾದರೆ ಮಂಗಳೂರಿನ ಮೇರಿಹಿಲ್ ಗೆ ಹೋಗಬೇಕು. ವಿಷಯ ಅಷ್ಟು ಜಟಿಲ ಇರುವಾಗ ನರಿಂಗಾಣದ ಕಲ್ಲರಕೋಡಿ ಶಾಲಾ ಮೈದಾನದಲ್ಲೇ ಹೆಲಿಕಾಪ್ಟರ್ ಬಂದು ಇಳಿಯುವಾಗ ಯಾವ ಮಕ್ಕಳು ಸಂಭ್ರಮಿಸುವುದಿಲ್ಲ ಹೇಳಿ?. ಇತ್ತ ಪುಟಾಣಿಗಳು
ನೆಲದಲ್ಲಿ ನಿಂತು ಸಂಭ್ರಮಿಸುತ್ತಿದ್ದರೆ ಅತ್ತ ಆಗಸದಲ್ಲಿ ಹಾರುತ್ತಿದ್ದ ಖಾದರ್ ಅವರು ತನ್ನ ಮೊಬೈಲ್ ನಲ್ಲಿ ಸುಂದರ ಕ್ಷಣಗಳನ್ನು ಕ್ಲಿಕ್ಕಿಸುತ್ತಾ ಮಕ್ಕಳ ಹಾಗೆ ಸಂಭ್ರಮಿಸಿದರು.