ಇತ್ತೀಚಿನ ಸುದ್ದಿ
4ರ ಹರೆಯದ ಪುತ್ರನ ಕೊಂದ ಸ್ಟಾರ್ಟ್ ಅಪ್ ಕಂಪನಿ ಸಿಇಒ ಸುಚನಾಳಿಗೆ ಪೊಲೀಸ್ ಕಸ್ಟಡಿ: ಪತಿಯ ಮೇಲಿನ ಕೋಪಕ್ಕೆ ಮಗು ಬಲಿ
09/01/2024, 18:14
ಪಣಜಿ(reporterkarnataka.com): ತನ್ನ ನಾಲ್ಕು ವರ್ಷದ ಪುತ್ರನನ್ನು ಕೊಂದ ಹಂತಕಿ ಮೈಂಡ್ ಫುಲ್ ಎಐ ಲ್ಯಾಬ್ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾಳನ್ನು ಗೋವಾ ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಗೋವಾದ ಮಾಪುಸಾ ಕೋರ್ಟ್ ಗೆ ಹಂತಕಿ ಸುಚನಾಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಗೋವಾದಲ್ಲಿರುವ ಹೋಟೆಲ್‌ನಲ್ಲಿ ತನ್ನ ಸ್ವಂತ ಮಗನನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಶವ ತುಂಬಿ ರವಾನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಕಾರಿನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್ ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು.
ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಗೋವಾ ಪೊಲೀಸರು ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದು ಗೋವಾಕ್ಕೆ ಕರೆದೊಯ್ದಿದ್ದರು.
ಪತಿ ಮೇಲಿನ ಕೋಪದಿಂದ ತಾನು ಮಗನನ್ನು ಕೊಂದಿರುವುದಾಗಿ ಸುಚನಾ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ತಿಳಿದ್ದಾಳೆ ಎಂದು ತಿಳಿದು ಬಂದಿದೆ.