ಇತ್ತೀಚಿನ ಸುದ್ದಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ. ಅಮೃತ ಸೋಮೇಶ್ವರ ಅಸ್ತಂಗತ: ಮುಖ್ಯಮಂತ್ರಿ ಸಹಿತ ಗಣ್ಯರ ಸಂತಾಪ
06/01/2024, 19:32
ಮಂಗಳೂರು(reporterkarnataka.com): ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮೃತ ಸೋಮೇಶ್ವ(88) ಅವರು ಅನಾರೋಗ್ಯದಿಂದ ಶನಿವಾರ ಕೊನೆಯುಸಿರೆಳೆದರು.
ಲೇಖಕ, ಯಕ್ಷಗಾನ ಪ್ರಸಂಗಕರ್ತ, ಅನುವಾದಕ, ಸಂಶೋಧಕ, ವಿಮರ್ಶಕ, ಜಾನಪದ ವಿದ್ವಾಂಸ, ಕವಿ, ಕತೆಗಾರ, ನಾಟಕಕಾರ ಆಗಿರುವ ಅಮೃತ ಸೋಮೇಶ್ವರ ಅವರು ಶನಿವಾರ ಸ್ವಗೃಹದಲ್ಲಿ ಅಸ್ತಂಗತರಾದರು. 1968ರಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರ್ಪಡೆಗೊಂಡರು. ಅಲ್ಲಿ ಕನ್ನಡ ಸಂಘ, ಯಕ್ಷರಂಜಿನಿ ಮುಂತಾದ ಸಂಘನೆಗಳನ್ನು ಹುಟ್ಟುಹಾಕಿ ಬರಹಗಾರರನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ಕಲಾವಿದರ ಹುಟ್ಟಿಗೆ ಕಾರಣರಾದರು. ಪ್ರೊ. ಅಮೃತ ಸೋಮೇಶ್ವರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಂದಾಯವಾಗಿದೆ.
ಪ್ರೊ. ಅಮೃತ ಸೋಮೇಶ್ವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.