ಇತ್ತೀಚಿನ ಸುದ್ದಿ
ಮಸ್ಕಿ: ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಭವನಕ್ಕೆ ಭೂಮಿಪೂಜೆ; ನೂತನ ಶಾಸಕರಿಂದ ಶಿಲಾನ್ಯಾಸ
06/08/2021, 17:32
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮಸ್ಕಿ ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ದ ವತಿಯಿಂದ ಜೋಗಿನ ರಾಮಣ್ಣ ಶಾಲೆ ಆವರಣದಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಭವನದ ಭೂಮಿ ಪೂಜೆಯನ್ನು ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಶಾಲಾ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಹಿತಕ್ಕಾಗಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುತ್ತದೆ.
ಮಕ್ಕಳ ಭವಿಷ್ಯಕ್ಕಾಗಿ ಅವರಿಗೆ ಏನು ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ. ಮಕ್ಕಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುವ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೀಲಾವತಿ ಮಲ್ಲಿಕಾರ್ಜುನ ಕಾರಟಿಗಿ, ವೀರೇಶ ಸೌದ್ರಿ, ದಯಾನಂದ ಜೋಗಿನ, ಸಿದ್ದರೆಡ್ಡಿ, ಕೃಷ್ಣ ಡಿ.ಚಿಗರಿ, ಮಲ್ಲಿಕಾರ್ಜುನ ಹಳ್ಳಿ, ಸುರೇಶ್ ಬ್ಯಾಳಿ, ಶರಣಪ್ಪ ಎಲಿಗಾರ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಸ್ಕಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕರೋನ ಸಹಾಯ ಹಸ್ತ ಅಭಿಯಾನಯಡಿಯಲ್ಲಿ ಮೃತಪಟ್ಟವರ ಮನೆಗೆ ತರಳಿ ಸಾತ್ವನ ಹೇಳುವ ಮುಖಾಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಪೂರ್ವ ಮಾಹಿತಿ ಸಂಗ್ರಹಿಸಿ ಸಹಾಯ ಹಸ್ತ ಸ್ವಿಕೃತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಹೂವಿನಭಾವಿ, ಬಸನಗೌಡ ಮುದವಾಳ,ಆನಂದ ವಿರುಪೂರ, ಕೃಷ್ಣ ಡಿ.ಚಿಗರಿ, ಅಮರೇಗೌಡ ಕಡಬೂರು ಹಾಗೂ ಇನ್ನಿತರ ಉಪಸ್ಥಿತರಿದ್ದರು.