ಇತ್ತೀಚಿನ ಸುದ್ದಿ
ಸಚಿವರಾದ ಬಳಿಕ ಸುನಿಲ್ ಕುಮಾರ್ ಇಂದು ಮೊದಲ ಬಾರಿಗೆ ತವರಿಗೆ: ಉಡುಪಿ, ಕಾರ್ಕಳ, ಹಿರಿಯಡ್ಕಕ್ಕೆ ಭೇಟಿ
06/08/2021, 09:14
ಕಾರ್ಕಳ(reporterkarnataka. com):ಸಚಿವರಾದ ಬಳಿಕ ಮೊದಲ ಬಾರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ತವರು ಜಿಲ್ಲೆಗೆ ಇಂದು ಆಗಮಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ನೂತನ ಸಚಿವರು ಬೆಳ್ಮಣ್ ಗೆ ಆಗಮಿಸುವರು. ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಕಾರ್ಕಳಕ್ಕೆ ಕರೆದು ತರಲಾಗುವುದು. 11.30ಕ್ಕೆ ಕಾರ್ಕಳದ ಬಂಡಿಮಠ ಬಸ್ ನಿಲ್ದಾಣ ಬಳಿ ಸಚಿವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅವರಿಗೆ ಉಡುಪಿಯ ಅಮೃತ ಗಾರ್ಡನ್ ನಲ್ಲಿ ಬಿಜೆಪಿ ವತಿಯಿಂದ ಸಾರ್ವಜನಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು. 6 ಗಂಟೆಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಸನ್ಮಾನ, ರಾತ್ರಿ 7ಕ್ಕೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡುವರು. ರಾತ್ರಿ ಕಾರ್ಕಳ ದಲ್ಲಿ ವಾಸ್ತವ್ಯ.