ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಅನಸೂಯಾ ಜಯಂತಿ ಸಂಕೀರ್ತನಾ ಯಾತ್ರೆ; ಖಾಕಿ ಸರ್ಪಗಾವಲು; 2 ಸಾವಿರ ಮಹಿಳೆಯರಿಗೆ 1500 ಪೊಲೀಸರ ಭದ್ರತೆ!
24/12/2023, 12:39
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ವತಿಯಿಂದ
ದತ್ತಜಯಂತಿ ಅಂಗವಾಗಿ ಇಂದು ಅನುಸೂಯ ಜಯಂತಿಯ ಸಂಕೀರ್ತನಾ ಯಾತ್ರೆ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ನಗರದಲ್ಲಿ ನಡೆಯಿತು.
ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದಿಂದ ಯಾತ್ರೆ ಆರಂಭವಾಯಿತು. ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಭಾಗಿವಹಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು.
ಸಂಕೀರ್ತನಾ ಯಾತ್ರೆ ಬಳಿಕ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದಕೆ ದರ್ಶನ ಮಾಡಲಾಯಿತು. ಮಹಿಳೆಯರಿಂದ ದತ್ತ ಪಾದುಕೆ ದರ್ಶನ, ಹೋಮ ಪೂಜೆ ನಡೆಯಿತು. ಸಂಕೀರ್ತನಾ ಯಾತ್ರೆಗೆ ಸಾವಿರಾರು ಪೊಲೀಸರ ಬಂದೋಬಸ್ತ್ ಒದಗಿಸಿದ್ದರು. 2000 ಮಹಿಳೆಯರಿಗೆ 1500 ಪೊಲೀಸರ ಕಾವಲು ನೀಡಲಾಗಿತ್ತು.