ಇತ್ತೀಚಿನ ಸುದ್ದಿ
ಮಂಜೇಶ್ವರ ಮದನಂತೇಶ್ವರ ದೇವಸ್ಥಾನ ನಾಗರ ಪಂಚಮಿ ಉತ್ಸವ: ಸಾರ್ವಜನಿಕರಿಗೆ ಅವಕಾಶವಿಲ್ಲ; ಸೇವೆ ಸಲ್ಲಿಸುವವರು ದೇಗುಲ ಸಂಪರ್ಕಿಸಿ
05/08/2021, 20:21
ಚಿತ್ರ : ಪೈ ಮಂಜೇಶ್ವರ
ಮಂಜೇಶ್ವರ(reporterkarnataka.com): ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನಾಗರಪಂಚಮಿ ಉತ್ಸವವು ಈ ವರ್ಷ ಆಗಸ್ಟ್ 13ರಂದು ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸುವ ಅವಕಾಶವಿರುವುದಿಲ್ಲ.
ಈ ಬಾರಿಯ ನಾಗರಪಂಚಮಿ ಉತ್ಸವವು ಇದೇ ಬರುವ 13ರಂದು ಶುಕ್ರವಾರ ನಡೆಯಲಿರುವುದು. ಕೋವಿಡ್ ಮಹಾಮಾರಿ ಹೆಚ್ಚಾಗಿರುವುದರಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಸೇವೆ ಮಾಡಲು ಇಚ್ಚಿಸುವ ಭಗವದ್ಭಕ್ತರು ದೇಗುಲದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿ ಸೇವೆ ಸಲ್ಲಿಸಬಹುದು. ಸೇವಾ ಪ್ರಸಾದವನ್ನು ಅಂಚೆಯ ಮೂಲಕ ತಮಗೆ ತಲುಪಿಸಲಾಗುವುದು.
ಸೇವೆಗಳ ವಿವರ: ನಾಗಪೂಜೆ, ವಾಸುಕಿ ಪೂಜೆ ,ಪಂಚಾಮೃತ ಅಭಿಷೇಕ ,ನಂದಾದೀಪ,ಸಂಪರ್ಕಿಸಲು ದೂರವಾಣಿ ಸಂಖ್ಯೆ 974 667 7710