ಇತ್ತೀಚಿನ ಸುದ್ದಿ
ಗೃಹಿಣಿಯ ಅತ್ಯಾಚಾರ ಯತ್ನ ಪ್ರಕರಣ: ಕಾಮುಕ ಆರೋಪಿ ಅಂದರ್; ಹುಲ್ಲಹಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ
20/12/2023, 14:41
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪತಿಗೆ ಮೊಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಾಮುಕನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ಸಮೀಪವಿರುವ ತೋಟದ ಬಳಿ ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು .ಪತಿ ಮುಂದೆಯೇ ಪತ್ನಿ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಕಾಮುಕ ನವೀನ್ ಕುಮಾರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆ ಮೇಲೆ ಕಾಮುಕ ದೃಷ್ಟಿ ಬೀರಿದ್ದ ನವೀನ್ ಕುಮಾರ್ ಪತಿ ಮನೆ ಒಳಗೆ ತೆರಳಿದ್ದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪತ್ನಿಯ ಚೀರಾಟ ಕೇಳಿ ಪತಿ ಓಡಿಬಂದು ರಕ್ಷಣೆಗೆ ಧಾವಿಸಿದಾಗ ಮೊಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ.ಆರೋಪಿಯ ಸೆರೆಗಾಗಿ ಹುಲ್ಲಹಳ್ಳಿ ಠಾಣೆ ಪೊಲೀಸರು ಬಲೆ ಬೀಸಿದ್ದರು.ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.