3:53 AM Tuesday14 - January 2025
ಬ್ರೇಕಿಂಗ್ ನ್ಯೂಸ್
ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ…

ಇತ್ತೀಚಿನ ಸುದ್ದಿ

ಶಿಶಿಲದಲ್ಲೊಬ್ಬ ಮಾಡರ್ನ್ ರಾಕ್ಷಸ: ಹೆಂಡ್ತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಕಣ್ಣನ್ನೇ ಕಚ್ಚಿ ಹೊರಗೆಳೆದ ದುಷ್ಟ

19/12/2023, 22:10

ಬೆಳ್ತಂಗಡಿ(reporterkarnataka.com): ಆತ ಬರೇ ಕ್ರೂರಿಯಷ್ಟೇ ಅಲ್ಲ, ಮಹಾ ರಾಕ್ಷಸ. ಸದಾ ಕುಡಿತದ ದಾಸನಾಗಿದ್ದ ಆತ ಕುಡಿತದ ಮತ್ತಿನಲ್ಲ ಮನೆಗೆ ಬಂದು ಹೆಂಡ್ತಿ – ಮಗಳಿಗೆ ಹೊಡೆದದ್ದು ಮಾತ್ರವಲ್ಲ, ಕೈಹಿಡಿದ ಪತ್ನಿಯ ಕಣ್ಣು ಹೊರಗೆ ಬರುವಂತೆ ಕಚ್ಚಿ ಗಾಯಗೊಳಿಸಿದ್ದಾನೆ. ಗಾಯಗೊಂಡ ಪತ್ನಿ ಮತ್ತು ಪುತ್ರಿ ಆಸ್ಪತ್ರೆ ಸೇರಿದ್ದಾರೆ.
ಇದು ನಡೆದದ್ದು ದೂರದ ಬಿಹಾರ ಅಥವಾ ಉತ್ತರ ಪ್ರದೇಶದಲ್ಲಿ ಅಲ್ಲ. ಬದಲಿಗೆ, ನಮ್ಮ ನೆರೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ.
ಶಿಶಿಲದ ಕೋಟೆಬಾಗಿಲು ನಿವಾಸಿಯಾದ ಸುರೇಶ ಗೌಡ ಸೋಮವಾರ ತಡರಾತ್ರಿ ಕುಡಿದು ಬಂದು ಪತ್ನಿ ಹಾಗೂ ತನ್ನ 19ರ ಹರೆಯದ ಪುತ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸಮಾಧಾನ ಹೊಂದಿದ ಆತ ಹೆಂಡ್ತಿ ಎಡ ಕೆನ್ನೆಯನ್ನು ಕಚ್ಚಿ ಗಾಯಗೊಳಿಸಿದ್ದು, ಮಾತ್ರವಲ್ಲದೆ ಎಡಕಣ್ಣನ್ನು ಕಚ್ಚಿ ಹೊರಗೆ ಎಳೆದಿದ್ದಾನೆ. ಬಳಿಕ ದೊಣ್ಣೆಯಿಂದ ಹೊಡೆದಿದ್ದಾನೆ. ಇದನ್ನು ತಡೆಯಲು ಬಂದ ಮಗಳ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ಮಗಳು ತಂದೆಯಿಂದ ತಪ್ಪಿಸಿಕೊಂಡು ನೆರೆಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ಅಷ್ಟರಲ್ಲಿ ಹೆಂಡ್ತಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ನೆರೆಹೊರೆಯವರು ಬರುತ್ತಿದ್ದಂತೆ ಸುರೇಶ್ ಗೌಡ ಕತ್ತಲಲ್ಲಿ ತಪ್ಪಿಸಿಕೊಂಡಿದ್ದಾನೆ. ತಾಯಿ ಮತ್ತು ಮಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು