ಇತ್ತೀಚಿನ ಸುದ್ದಿ
ಹಗರಿಬೊಮ್ಮನಹಳ್ಳಿ: ವಿವಿಧ ಹಕ್ಕೊತ್ತಾಯ ಈಡೇರಿಸುವಂತೆ ಒತ್ತಾಯಿಸಿ ನರೇಗಾ ಕಾರ್ಮಿಕರಿಂದ ಪ್ರಧಾನಿ ಮೋದಿಗೆ ಪತ್ರ
16/12/2023, 21:50
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterarnataka@gmail.com
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮ ಸೇರಿದಂತೆ ಸೊನ್ನ. ಚಿಲ್ಗೊಡು, ಹಂಪಾಪಟ್ಟಣ,
ಪಿಲೋಬನಹಳ್ಳಿ, ವಲ್ಲಬಾಪೂರ, ಕೋಡಿಹಳ್ಳಿ ಗ್ರಾಮಗಳಲ್ಲಿನ ನರೇಗಾ ಕಾರ್ಮಿಕರು, ಡಿ15ರಂದು ತಮ್ಮ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಪತ್ರ ರವಾನಿಸುವ ಮೂಲಕ ಪತ್ರ ಚಳವಳಿ ಮೂಲಕ ಹೋರಾಟ ನಡೆಸಿದರು.ಅವರು ಗ್ರಾಕೂಸ್ ಸಂಘಟನೆಯಮುಖಂಡರಾದ,ಎಂ.ಬಿ.ಕೊಟ್ರಮ್ಮ ಹಾಗೂ ಅಕ್ಕಮಹಾದೇವಿ ರವರ ನೇತೃತ್ವದಲ್ಲಿ ಪತ್ರ ಚಳುವಳಿ ಹೋರಾಟ ನಡೆಸಿದರು. ಮೂರು ತಿಂಗಳಿಂದ ಕೂಲಿ ಹಣ ಮಂಜೂರು ಮಾಡಿಲ್ಲ ಕಾರಣ ಬಾಕಿ ಹಣದೊಂದಿಗೆ ಸೂಕ್ತ ಬಡ್ಡಿ ಸಹಿತ, ಶೀಘ್ರವೇ ಹಣ ತಮಗೆ ಸಂದಾಯ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಬರಗಾಲ ಆವರಿಸಿದ್ದು ಹಗರಿಬೊಮ್ಮನಹಳ್ಳಿ ತಾಲೂಕನ್ನು, ಭೀಕರ ಬರ ಪೀಡಿತ ತಾಲೂಕೆಂದು ಘೋಷಿಸಬೇಕು. ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ನೀಡಿ, ಸರ್ಕಾರ ಶೀಘ್ರವೇ ಘೋಷಸಿ ಕ್ರಮ ಜರುಗಿಸಬೇಕು ಸೇರಿದಂತೆ. ವಿವಿದ ಹಕ್ಕೊತ್ತಾಯಗಳನ್ನು ಕಾರ್ಮಿಕರು ಈಡೇರಿಸಲು ಕಾರ್ಮಿಕರು, ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಲ, ರೇವಣ್ಣ, ಪವಿತ್ರ ಚೈತ್ರ, ದೇವೇಂದ್ರ, ಅಶೋಕ, ನಾಗರಾಜ, ಅಂಜಿನಮ್ಮ, ಹುಲಿಗೆಮ್ಮ, ಈರಣ್ಣ, ರಾಗವೇಂದ್ರ, ನಾರಪ್ಪ, ಗಿರಿಜಮ್ಮ, ಮಾಲಿಂಗಪ್ಪ, ,ಹನುಮಂತ, ಸುಜಾತಾ, ಗೋಣೆಪ್ಪ, ಶಶಿಕುಮಾರ, ಜಗದೀಶ, ನಾಗರಾಜ, ಬಸಲಿಂಗಮ್ಮ, ಕ್ಯಾದಿಗಿಹಾಳ ಪಕ್ಕಿರಪ್ಪ. ಚಿಗಿರಿ ಅನುಮಂತಪ್ಪ. ತಲ್ವಾರ್ ಗಂಗಪ್ಪ. ಬೂದಿಹಳ್ಳಿ ದೊಡ್ಬಸಪ್ಪ. ಬಣದ ವಿರೂಪಾಕ್ಷಪ್ಪ.ಶೇಖರಪ್ಪ. ದ್ರಾಕ್ಷಯಿನಿ.ಕಲಾವತಿ ಶಾಂತಮ್ಮ, ಜಾನಮ್ಮ ಪಾರ್ವತಮ್ಮ ಶಿವಸೀನಮ್ಮ. ಚಂದ್ರಗೌಡ. ಯುವರಾಜ. ಶಿವಣ್ಣ ರಮೇಶ್. ಸಿದ್ಲಿಂಗಪ್ಪ. ಹನುಮಕ್ಕ. ಗೂಳಿ ಮಂಜುನಾಥ. ಹುಲುಗಪ್ಪ. ಉಮೇಶ. ಪುಸ್ಪವತಿ. ಲಲಿತಾ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.