ಇತ್ತೀಚಿನ ಸುದ್ದಿ
ಹುಲ್ಲಹಳ್ಳಿಯಲ್ಲಿ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮ: ಎಎಸ್ಐ ಶಿವಣ್ಣ ಮತ್ತು ದೊಡ್ಡಯ್ಯ ಅವರಿಂದ ಜಾಗೃತಿ
12/12/2023, 18:21
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಬೇಕು. ನಾಲ್ಕು ಚಕ್ರ ಹಾಗೂ ದೊಡ್ಡ ವಾಹನದ ಚಾಲಕರು ಸರ್ಕಾರ ಜಾರಿ ಮಾಡಿರುವ ಸಂಚಾರಿ ನಿಯಮವನ್ನು ಪಾಲನೆ ಮಾಡಬೇಕು. ನಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು, ಮತ್ತೊಬ್ಬರ ಜೀವವನ್ನು ಸುರಕ್ಷತೆಗೊಳಿಸಬೇಕು ಎಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಶಿವಣ್ಣ ಮತ್ತು ದೊಡ್ಡಯ್ಯ ನೀತಿ ಪಾಠ ಹೇಳಿ ಸಂಚಾರಿ ನಿಯಮವನ್ನು ಪಾಲನೆ ಮಾಡಲು ಜಾಗೃತಿ ಮೂಡಿಸಿದರು.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ನಂಜನಗೂಡಿನ ಡಿವೈಎಸ್ಪಿ ಗೋವಿಂದರಾಜು ವೃತ್ತ ನಿರೀಕ್ಷಕ ಬಸವರಾಜು ರವರ ಮಾರ್ಗದರ್ಶನದಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರ್ಕಿ ಕಟ್ಟೆ ಅವರ ನೇತೃತ್ವದಲ್ಲಿ ಅಪರಾಧ ತಡೆ ಮಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ನಾವು ಕಾನೂನು ಪಾಲನೆ ಮಾಡುವ ಸಲುವಾಗಿ ತಮಗೆ ಇಲಾಖೆ ತೋರುವ ಎಲ್ಲಾ ನೀತಿ ನಿಯಮ ಸಲಹೆಗಳನ್ನು ನೀಡುತ್ತಿದ್ದೇವೆ ಯಾರೇ ಆಗಲಿ ಕಾನೂನು ಪಾಲನೆ ಮಾಡಿ. ಕಾನೂನಿನ ಅರಿವನ್ನು ನೀವು ಅಳವಡಿಸಿಕೊಳ್ಳಬೇಕು ಮತ್ತೊಬ್ಬರಿಗೂ ತಿಳಿ ಹೆಳಬೇಕು ಎಂಬ ಸದ್ದು ದೇಶದಿಂದ ನಿರಂತರವಾಗಿ ಹುಲ್ಲಹಳ್ಳಿ ಹೋಬಳಿ ಕೇಂದ್ರದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಸಂದರ್ಭದಲ್ಲಿ ಆಟೋ ಚಾಲಕರು ಮತ್ತು ವಾಹನ ಚಾಲಕರ ಜೊತೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂದರ್ಭದಲ್ಲಿ ಎಎಸ್ಐ ಶಿವಣ್ಣ ದಫೆದರ್ ದೊಡ್ಡಯ್ಯ ಸರಿದಂತೆ ಸಾಕಷ್ಟು ಸಿಬ್ಬಂದಿಗಳು ಆಟೋ ಚಾಲಕರು ಮತ್ತು ವಾಹನ ಚಾಲಕರು ಸಾರ್ವಜನಿಕರು ಹಾಜರಿದ್ದರು.