ಇತ್ತೀಚಿನ ಸುದ್ದಿ
ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ: 68,000/- ಮೌಲ್ಯದ ಸೊತ್ತು ವಶಕ್ಕೆ
04/12/2023, 20:31
ಮಂಗಳೂರು(reporterkarnataka.com): ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿದ್ದು, 68,000/- ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಹುಸೇನ್ ಜಾಯಿದ್ ಎಂಬಾತನನ್ನು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿ ಐಸಮ್ಮ ಎಂಬವರ ಹೋಂಡಾ ಡೀಯೋವನ್ನು ವಾಹನ ಕಳ್ಳತನ ಮಾಡಿದ ಪ್ರಕರಣ ಹಾಗೂ ದೇರಳಕಟ್ಟೆಯ ಗ್ರೀನ್ ಗೌಂಡ್ ಬಳಿ ನಿಲ್ಲಿಸಿದ ಹೋಂಡಾ ಆಕ್ಟಿವಾ ವಾಹನ ಕಳವು ಮಾಡಿದ ಪ್ರಕರಣ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ ರವರು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು