ಇತ್ತೀಚಿನ ಸುದ್ದಿ
ಮಂಗಳೂರು: 4 ತಿಂಗಳ ಹಸುಗೂಸಿನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೆತ್ತಬ್ಬೆ
03/12/2023, 14:28
ಮಂಗಳೂರು(reporterkarnataka.com): ಮಾನಸಖಿನ್ನತೆಗೊಳಗಾದ ಬಾಣಂತಿ ಗೃಹಿಣಿಯೊಬ್ಬರು ತನ್ನ 4 ತಿಂಗಳ ಶಿಶುವನ್ನು ಟಬ್ ನೀರಿನಲ್ಲಿ ಮುಳುಗಿಸಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಗರದ ಗುಜ್ಜರಕೆರೆ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ.
ಗುಜ್ಜರಕೆರೆ ಸಮೀಪದ ಅಪಾರ್ಟ್ ಮೆಂಟ್ ನ ನಿವಾಸಿಯಾದ ಫಾತಿಮಾ(23) ಎಂಬ ಬಾಣಂತಿ ಯುವತಿ ಶಿಶುವನ್ನು ಕೊಂದು ಸಾವಿಗೆ ಶರಣಾದವರು ಎಂದು ತಿಳಿದು ಬಂದಿದೆ.
ಫಾತಿಮಾ ಅವರು ಎರಡು ವರ್ಷಗಳ ಹಿಂದೆ ಹುಸೈನ್ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ 4 ತಿಂಗಳ ಗಂಡು ಮಗು ಇದೆ. ಫಾತಿಮಾ ಅವರು ಹೆರಿಗೆ ಬಳಿಕ ಮಾನಸಿಕ ಖಿನ್ನತೆಗೊಳಗಾದರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಹೇಳುತ್ತಿದ್ದರು. ಅವರಿಗೆ ವೈದ್ಯರಲ್ಲಿ ಚಿಕಿತ್ಸೆ ಕೂಡ ನಡೆಯುತ್ತಿತ್ತು. ಆದರೆ ನಿನ್ನೆ ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫಾತಿಮಾ ತನ್ನ 4 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿ, ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.