ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಜಿಲ್ಲಾ ಬಲ್ಯಾಯ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು ಆಯ್ಕೆ
01/12/2023, 08:39
ಮಂಗಳೂರು(reporterkarnataka.com):ಬಲ್ಯಾಯ ಯಾನೆ ಕಣಿಷನ್ ಮಹಾಜನ ಸಂಘದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೂತನ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು ಆಯ್ಕೆಯಾಗಿದ್ದಾರೆ.
ಇವರು ಹಲವಾರು ವರ್ಷಗಳಿಂದ ಕಾರ್ಯಕಾರಿ ಸಮಿತಿಯಲ್ಲಿ ಸಕ್ರಿಯ ಕಾರ್ಯದರ್ಶಿಯಾಗಿ ಸಂಘದ ಅನೇಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಕೊಂಡಿದ್ದರು. ಸ್ವಜಾತಿ ಬಾಂಧವರ ನೆಚ್ಚಿನ ಒಡನಾಡಿಯಾಗಿದ್ದು, ಸಂಘದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅನೇಕ ವರ್ಷಗಳಿಂದ ಕೋಶಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರಳ ಸ್ವಭಾವದ ಶಾಂತ ಸ್ವರೂಪಿಯಾದ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರಾಮಾಣಿಕವಾಗಿ ದ. ಕ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಶಿಕ್ಷಕಿ ಎಂಬ ಬಿರುದುಗಳಿಸಿ ಸನ್ಮಾನಿತರಾಗಿರುತ್ತಾರೆ. ಪ್ರಸ್ತುತ ಸ್ಯಾಂಡ್ಸ್ ಪಿಟ್ ಬೆಂಗ್ರೆ ಬೆಂಗ್ರೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿದ್ಯಾರ್ಥಿಗಳ ಪ್ರೀತಿಯ ಉಮಾ ಟೀಚರ್.