ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ನರಭಕ್ಷಕ ವ್ಯಾಘ್ರನ ಆರ್ಭಟಕ್ಕೆ ಮತ್ತೊಬ್ಬ ದನಗಾಹಿ ಮಹಿಳೆ ಬಲಿ: ಕಾಡಿಗೆ ಎಳೆದೊಯ್ದ ಹುಲಿ; ಅರಣ್ಯ ಇಲಾಖೆ ವಿರುದ್ಧ ಭಾರೀ ಆಕ್ರೋಶ
25/11/2023, 13:01
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಹಾಡಹಗಲೇ ನರಭಕ್ಷಕ ಹುಲಿಯೊಂದು ಕುರಿಗಾಹಿ ಮಹಿಳೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದರ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ರತ್ನಮ್ಮ(50) ಎಂಬುವರೇ ನರಭಕ್ಷಕ ಹುಲಿಗೆ ಬಲಿಯಾದ ಮೃತ ಮಹಿಳೆ.
ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬುವರ ಪತ್ನಿ ಈ ಮೃತ ಮಹಿಳೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಮಹಿಳೆಯ ಮೇಲೆ ವ್ಯಾಘ್ರ ದಾಳಿ ನಡೆಸಿದೆ. ಹುಲಿಯು
ರತ್ನಮ್ಮ ಅವರನ್ನು ಜಮೀನಿನಿಂದ ಕಾಡಿನೊಳಗೆ ಎಳೆದೊಯ್ದಿದೆ.
ನರಭಕ್ಷಕ ಹುಲಿಗೆ ಬಲಿಯಾದ ರತ್ನಮ್ಮಳ ಮೃತದೇಹವನ್ನು ಕಾಡಿನಿಂದ ಹುಡುಕಿ ಗ್ರಾಮಸ್ಥರು ತಂದಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ನರಭಕ್ಷಕ ಹುಲಿ ದಾಳಿ ಮಾಡಿತ್ತು. ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗದ ಕಾರಣ ಈಗ ಮತ್ತೆ ದನಗಾಯಿ ಮಹಿಮೆ ಬಲಿಯಾಗಿದ್ದಾರೆ. ಹೆಡಿಯಾಲ ಬಳ್ಳೂರು ಹುಂಡಿ ಮಹದೇವ ನಗರ ಗ್ರಾಮದ ಸುತ್ತಮುತ್ತಲ ವಾಸಿಗಳು ಈಗ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೆಡಿಯಾಲ ಅರಣ್ಯ ಇಲಾಖೆಯ ಆರ್‌ಎಫ್‌ಒ ನಾರಾಯಣ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಮೃತ ಮಹಿಳೆ ರತ್ನಮಳ ಮೃತ ದೇಹವನ್ನು ಹುಡುಕಿ ಗ್ರಾಮಕ್ಕೆ ತರಲಾಗಿದೆ.