ಇತ್ತೀಚಿನ ಸುದ್ದಿ
ಸ್ಮಾರ್ಟ್ ಸಿಟಿಯಡಿ ಜನರಿಗೆ, ಪಾಲಿಕೆಗೆ ಲಾಭ ತರುವ ಯೋಜನೆ ಅನುಷ್ಠಾನಗೊಂಡಿಲ್ಲ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಸಮಾಧಾನ
24/11/2023, 16:40
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜನರಿಗಾಗಲಿ, ಮಂಗಳೂರು ಮಹಾನಗರಪಾಲಿಕೆಗಾಗಲಿ ಲಾಭ ಬರುವಂತ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಶುಕ್ರವಾರ ನಗರದ ಪಾಂಡೇಶ್ವರ ಬಳಿಯ ಎಮ್ಮೆಕೆರೆಯಲ್ಲಿ ನೂತನವಾಗಿ ನಿರ್ಮಿಸಿದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ಬೇರೆ ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆದಾಯ ತರುವಂತಹ ಲಾಭದಾಯಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಸೆಟ್ ಕ್ರಿಯೆಟ್ ಮಾಡುವ ಕ್ರಿಯೆ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಿದೆ. ಸ್ಪೋರ್ಟ್ ಕಾಂಪ್ಲೆಕ್ಸ್, ಮಾರುಕಟ್ಟೆ ತರಹದ ಆದಾಯ ತರುವ ಯೋಜನೆಗಳನ್ನು ಅನುಷ್ಢಾನಗೊಳಿಸಲಾಗಿದೆ. ಆದರೆ ಶೈಕ್ಷಣಿಕ ಕೇಂದ್ರವಾದ ಮಂಗಳೂರಿನಲ್ಲಿ ಕೇವಲ ಅಭಿವೃದ್ಧಿ ಕಾಮಗಾರಿಗೆ ಮಾತ್ರ ಹಣ ಬಳಸಲಾಗಿದೆ. ಕನಿಷ್ಠ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನಾದರೂ ಅನುಷ್ಠಾನಗೊಳಿಸಬೇಕಿತ್ತು.
ಒಂದು ಸಾವಿರ ಕೋಟಿ ಅಂದ್ರೆ ಏನು ಸಣ್ಣ ಮೊತ್ತವಲ್ಲ ಎಂದು ಅವರು ಅವರು ನುಡಿದರು.
ಮುಂಬರುವ ದಿನಗಳಲ್ಲಿ ಬೇರೆ ಅನುದಾನದಡಿಯಲ್ಲಾದರೂ ಪಾಲಿಕೆಗೆ ಆದಾಯ ಬರುವಂತಹ ಯೋಜನೆಯನ್ನು ತರಲಾಗುವುದು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ 746 ಕೋಟಿ ಖರ್ಚಾಗಿದೆ. 24 ಕಾಮಗಾರಿ ಬಾಕಿ ಇದೆ. 262
ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. 3 ಕಾಮಗಾರಿಗೆ ಇನ್ನೂ ಅನುಮೋದನೆ ಸಿಗಬೇಕಾಗಿದೆ ಎಂದು ಸಚಿವರು ವಿವರ ನೀಡಿದರು.
ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಅಂತಾರಾಷ್ಟ್ರೀಯಮಟ್ಟದ ಸ್ವಿಮಿಂಗ್ ಪೂಲ್ ಮಂಗಳೂರಲ್ಲಿ ನಿರ್ಮಾಣವಾಗಿದ್ದು, ಮಂಗಳೂರಿನ ಸ್ಥಳೀಯ ಪ್ರದೇಶದ ಸಣ್ಣ ಸಣ್ಣ ಮಕ್ಕಳು ಕೂಡ ಉತ್ತಮ ದರ್ಜೆಯ ಈಜು ಸ್ಪರ್ಧೆಗೆ ತಯಾರಿ ಮಾಡಿಕೊಳ್ಳಬಹುದು. ವಿವಿಧ ಕ್ರೀಡೆಗಳನ್ನು ಆಡಲೂ ಕೂಡ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೂ 2.5 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಕೇಂದ್ರ ಸ್ಥಳವಾಗುತ್ತದೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ , ಪಾಲಿಕೆ ವಿರೋಧ ಪಕ್ಷ ನಾಯಕ ಟಿ.ಪ್ರವೀಣ್ ಚಂದ್ರ ಆಳ್ವ, ಜಿಲ್ಲಾಧಿಕಾರಿ ಮುಗಿಲನ್ ಮತ್ತಿರರು ಉಪಸ್ಥಿತರಿದ್ದರು.