8:06 PM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ವಿಕಲಚೇತನರ ಬಾಳಲ್ಲಿ ದೀಪಾವಳಿ ಬೆಳಕು ಮೂಡಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ: ಇಬ್ಬರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ವಿತರಣೆ

14/11/2023, 19:41

ಶಿವರಾಯ ಲಕ್ಷ್ಮಣ ಕರ್ಕರಮುಂಡಿ

info.reporterkarnataka@gmail.com

ಇಬ್ಬರು ವಿಕಲಚೇತನರಿಗೆ ದೀಪಾವಳಿಯ ಶುಭಪರ್ವದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬೆಳಕು ಹರಿಸಿದರು. ಇಬ್ಬರು ವಿಕಲಚೇತನರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ನಡೆಸಿದರು.
ಬಸವಾದಿ ಶಿವ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ರಾಜಕಾರಣದಲ್ಲಿ ಪ್ರಾಮಾಣಿಕ ಜನ ಸೇವೆ ಮೂಲಕ ಹೆಸರಾದವರು ಲಕ್ಷ್ಮಣ ಸಂ. ಸವದಿ ಅವರು.
ದಾನ-ಧರ್ಮ, ಪರೋಪಕಾರ ಗುಣ, ಮಾತೃ ಹೃದಯದ ಸರಳ ಸಜ್ಜನಿಕೆಯ ರಾಜಕಾರಣಿ ಅವರು. ಬಡವರು, ಹಿಂದುಳಿದವರು, ಅಸಹಾಯಕರ ಕಷ್ಟ ಕಾರ್ಪಣ್ಯಗಳಿಗೆ ತಕ್ಷಣವೇ ಸ್ಪಂದಿಸುವವರು. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಸುದ್ದಿವಾಹಿನಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಎಚ್.ಆರ್. ರಂಗನಾಥ ಅವರು ತಮ್ಮ ವಿಶೇಷ ಬೆಳಕು ಕಾರ್ಯಕ್ರಮದಲ್ಲಿ ಲಕ್ಷ್ಮಣ ಸಂ. ಸವದಿಯವರನ್ನು ಸಂಪರ್ಕಿಸಿ, ನಿಮ್ಮ ತಾಲೂಕಿನ ಬಾಳಿಗೇರಿ ಗ್ರಾಮದ ಕುರಿಗಾಹಿ ಯುವಕನೊಬ್ಬ ಕುರಿಗಳ ಮೇವಿಗಾಗಿ ಗಿಡ ಹತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಬೆನ್ನು ಹುರಿ ಮೂಳೆ ಮುರಿತದಿಂದ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಇದರಿಂದ ಆತ ಜೀವನ ಸಾಗಿಸಲು ಸಂಕಷ್ಟಪಡುತ್ತಿದ್ದಾನೆ. ಅವನಿಗೆ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಲಕ್ಷ್ಮಣ ಸಂ. ಸವದಿಯವರು ವೈಯಕ್ತಿಕವಾಗಿ 1 ಲಕ್ಷ ರೂ. ವೆಚ್ಚದಲ್ಲಿ ಚೆನೈದಿಂದ ವಿಶೇಷ ವಿದ್ಯುತ್ ಚಾಲಿತ ತ್ರಿ ಚಕ್ರ ವಾಹನವನ್ನು ತರಿಸಿ ಹನಮಂತ ಕುರುಬರ ಅವರಿಗೆ ವಿತರಿಸಿದ್ದರು. ಈ ವಾಹನದ ವಿಶೇಷತೆಯಂದರೆ ಅಂಗವಿಕಲರು ಬಳಸುವ ಬೇರೆ ಬೈಕ್‌ಗಳಿಗಿಂತ ಭಿನ್ನವಾಗಿದೆ. ಇದು ಬೆನ್ನು ಹುರಿ ಮೂಳೆ ಮುರಿತಕ್ಕೊಳಗಾದವರಿಗೆ ಸಂಚರಿಸಲು ಅನುಕೂಲಕರವಾಗಿದೆ. ಈ ಬಾರಿ ಹನಮಂತ ಕುರುಬರ ಅವರು ದಿ. 14-11-2023ರಂದು ಬೆಳಗ್ಗೆ ಲಕ್ಷ್ಮಣ ಸಂ. ಸವದಿಯವರನ್ನು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಲಕ್ಷ್ಮಣ ಸವದಿಯವರು ನನಗೆ ತ್ರಿ ಚಕ್ರ ವಾಹನ ನೀಡಿದ್ದರಿಂದ ನನಗೆ ಸಂಚರಿಸಲು ಅನುಕೂಲವಾಗಿದ್ದು, ಒಂದು ವರ್ಷದಲ್ಲಿ ನನ್ನ ಬದುಕು ಬದಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಲಕ್ಷ್ಮಣ ಸವದಿಯವರ ಮಾನವೀಯ ಗುಣವನ್ನು ಸ್ಮರಿಸಿ ಧನ್ಯತಾ ಭಾವ ವ್ಯಕ್ತಪಡಿಸಿದರು.


ಈ ಬಾರಿ ದೀಪಾವಳಿಗೆ ಅಥಣಿ ಮತಕ್ಷೇತ್ರದ ಬಡಚಿ ಗ್ರಾಮದ ಬಸಪ್ಪಾ ಹೂವಣ್ಣಾ ಪೂಜಾರಿ, ದೇಸಾರಟ್ಟಿ ಗ್ರಾಮದ ಸಚಿನ ನಾರಾಯಣ ಸಾವಗಾಂವಕರ ಅವರಿಗೆ ತಲಾ 1 ಲಕ್ಷ 5 ಸಾವಿರ ರೂ. ವೆಚ್ಚದಲ್ಲಿ ಎರಡು ತ್ರಿ ಚಕ್ರ ವಾಹನಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ದೀಪಾವಳಿ ಸಂದರ್ಭದಲ್ಲಿ ನಿವಾಸದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸಂ. ಸವದಿಯವರು, ಕಳೆದ ಬಾರಿ ಅಂಗವಿಕಲ ಹನಮಂತ ಕುರುಬರ ಅವರಿಗೆ ಈ ತ್ರಿಚಕ್ರ ವಾಹನ ನೀಡಲಾಗಿತ್ತು. ಅದು ಅವರಿಗೆ ಅನುಕೂಲವಾಗಿದೆ. ಅದರಂತೆ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಇಂತಹ ವಿಶೇಷ ಚೇತನ ಇಬ್ಬರು ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ನನ್ನ ವೈಯಕ್ತಿಕ ವೆಚ್ಚದಲ್ಲಿ ತ್ರಿ-ಚಕ್ರ ವಾಹನಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಬೆನ್ನುಹುರಿ ಮೂಳೆ ಮುರಿತಕ್ಕೊಳಗಾದ ವಿಕಲಚೇತನರನ್ನು ಗುರುತಿಸಿ ಅವರಿಗೆ ತ್ರಿ ಚಕ್ರ ವಾಹನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಅಭಿಮಾನಿಗಳ ಹಾರೈಕೆ:
ಇಂತಹ ಮಾನವೀಯ ಮೌಲ್ಯಯುತ ರಾಜಕಾರಣ, ಜನಪರ ಕಾರ್ಯಗಳಿಂದಲೇ ಲಕ್ಷ್ಮಣ ಸಂ. ಸವದಿಯವರು ಜನಮನದಲ್ಲಿದ್ದಾರೆ. ತಮ್ಮ 20-25 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಜನಮನ್ನಣೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು